ಜಿಲ್ಲೆ

ವಿದ್ಯುತ್ ತಂತಿ ತುಳಿದು ಹಸು ಸಾವು


ಹಾಸನ : ಅರಸೀಕೆರೆ ನಗರದ ಹೊರ ವಲಯದಲ್ಲಿರುವ ಮೆಳೆಯಮ್ಮದೇವಿ ದೇಗುಲಕ್ಕೆ ಹೊಂದಿಕೊಂಡಂತಿರುವ ಮೃತ್ಯುಂಜಯಪ್ಪ ಅವರ ಕೃಷಿ ಜಮೀನಿನಲ್ಲಿ ಗುರುವಾರ ವಿದ್ಯುತ್ ತಂತಿ ತುಳಿದು ಹಸು ಮೃತಪಟ್ಟಿದೆ.
ತೋಟದ ಮಧ್ಯೆ ಹಾದುಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ. ಸುದ್ದಿ ತಿಳಿದ ಸೆಸ್ಕ್ ಅಧಿಕಾರಿಗಳು ತಕ್ಷಣ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದರು. ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ್ಯುಂಜಯಪ್ಪ ಅವರಿಗೆ ಸೇರಿದ ಹಸು ಇದಾಗಿದ್ದು, ಮೇಯಲು ಬಿಟ್ಟಿದ್ದ ವೇಳೆ ಅವಘಡ ಸಂಭವಿಸಿದೆ.