ಜಿಲ್ಲೆ

ವಿದ್ಯುತ್ ತಂತಿ ತುಳಿದು ಹಸು ಸಾವು

ಅರಸೀಕೆರೆ: ನಗರದ ಹೊರ ವಲಯದಲ್ಲಿರುವ ಮೆಳೆಯಮ್ಮ ದೇವಿ ದೇಗುಲಕ್ಕೆ ಹೊಂದಿಕೊಂಡಂತಿರುವ ಮೃತ್ಯುಂಜಯಪ್ಪ ಕೃಷಿ ಜಮೀನಿನಲ್ಲಿ ವಿದ್ಯುತ್ ತಂತಿ ತುಳಿದು ಹಸು ಸಾವನ್ನಪ್ಪಿದೆ.

ತೋಟದ ಮದ್ಯೆ ಹಾದುಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬಿದ್ದಿದು ಅವಘಡಕ್ಕೆ ಕಾರಣ ಎನ್ನಲಾಗಿದೆ.

ಸುದ್ದಿ ತಿಳಿದ ಸೆಸ್ಕ್ ಅಧಿಕಾರಿಗಳು ತಕ್ಷಣವೇ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಹಸು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವ ಕುರಿತು ಉನ್ನತಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಸೆಸ್ಕ್ ಎಇಇ ಜಯಪ್ಪ ಭರವಸೆ ನೀಡಿದ್ದಾರೆ.