ಶಿರಾ: ತಾಲೂಕಿನ ಮುದ್ದುಗೆರೆ ಗ್ರಾಮದ ಸಮೀಪ ಕುರಿ ಮೇಯಿಸುತ್ತಿದ್ದ ಯುವಕ ಪುನೀತ್ (17) ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿ ತುಳಿದು ದೇಹ ಸಂಪೂರ್ಣ ಸುಟ್ಟಿದ್ದು, ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುದ್ದಗೆರೆ ಗ್ರಾಮದ ವಿಶ್ವನಾಥ್ ಅವರ ಪುತ್ರ ಪುನೀತ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಬುಧವಾರ ಸಂಜೆ ಕುರಿಗಳನ್ನು ಮನೆಗೆ ಹೊಡೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯದಲ್ಲಿ ವಿದ್ಯುತ್ ತಂತಿ ತುಳಿದಿದ್ದಾನೆ. ಬೆಸ್ಕಾಂ ಸಿಬ್ಬಂದಿ ತಂತಿ ತಪ್ಪಿಸಿ ಯುವಕನ್ನು ರಸಿದ್ದರೂ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಗಾಯಗಳಾಗಿವೆ.