ಜಿಲ್ಲೆ

ವಿದ್ಯುತ್ ಗುತ್ತಿಗೆದಾರರ ಗಡುವು ; ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ರಮೇಶ ಎಚ್ಚರಿಕೆ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜೆಸ್ಕಾಂ ವ್ಯಾಪ್ತಿಯಲ್ಲಿ ಮೀಟರ್‌ಗಳ ಕೊರತೆ ನೀಗಿಸಬೇಕು, ವ್ಯವಸ್ಥಾಪಕ ನಿರ್ದೇಶಕರ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕುವುದು ಸೇರಿದಂತೆ ವಿದ್ಯುತ್ ಗುತ್ತಿಗೆದಾರರ ಹಲವು ಬೇಡಿಕೆಗಳನ್ನು ಇಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು  ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ  ಸರ್ಕಾರಕೆಕ ಗುಡುವು ನೀಡಿ ಗುಡುಗಿದರು.
ನಗರದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಧ್ಯಕ್ಷರ ಜತೆಗೂಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರದವರೆಗೂ ಇಂಧನ ಸಚಿವರು ಮತ್ತು ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಸಭೆ ನಡೆಸಿ ನಿರ್ಧಾರವನ್ನು ಪ್ರಕಟಿಸಿದಿದ್ದರೆ, ಆ.5 ರಂದು ಕಲಬುರಗಿಯಲ್ಲಿ ಮುಖ್ಯಮಂತ್ರಿಗಳು ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲು ಬಂದಾಗ ಸುಮಾರು 5 ಸಾವಿರ ವಿದ್ಯುತ್ ಗುತ್ತಿಗೆದಾರರು ಸೇರಿಕೊಂಡು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಕಳೆದ ಏಳೆಂಟು ತಿಂಗಳಿAದ ಸಿಂಗಲ್ ಮತ್ತು ತ್ರೀ ಫೇಸ್ ವಿದ್ಯುತ್ ಮೀಟರ್ ಕೊರತೆಯಿಂದಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಹೊಸ ಗ್ರಾಹಕರು ಗೃಹ ಜ್ಯೋತಿ ಯೋಜನೆಯಿಂದ ವಂಚಿತಗೊಳ್ಳುವAತಾಗಿದೆ.ಹೀಗಾಗಿ ಮೀಟರ್ ಸಮಸ್ಯೆ ಪರಿಹರಿಸುವಂತೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವು ಸಲ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲ. ಈಗ  ಹೋರಾಟಕ್ಕೆ ಕರೆ ನೀಡಿದ್ದರಿಂದ ಆ.1 ರಂದು ಖರೀದಿಗೆ ಬೆಂಗಳೂರಿನ ಕಂಪನಿಯೊAದಕ್ಕೆ ತರಾತುರಿಯಲ್ಲಿ ಆದೇಶ ನೀಡಿದ್ದಾರೆ. ಅದು ನೋಡಿದಾಗ ಅದರಲ್ಲಿ ಹಣ ಸದ್ಬಳಕೆಯಾಗುವಂತೆ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಹೊಸದಾಗಿ ಮನೆ ನಿರ್ಮಿಸಿದ ಗ್ರಾಹಕರು ಹಾಗೂ ವಾಣಿಜ್ಯ ಉz್ದೆÃಶದ ಬಳಕೆದಾರರಿಗೆ ಹೊಸದಾಗಿ ಮೀಟರ್ ಅಳವಡಿಸಲು ಆಗುತ್ತಿಲ್ಲ. ಗುತ್ತಿಗೆದಾರರ ಹಾಗೂ ಗ್ರಾಹಕರು ತೊಂದರೆ ಅನುಭವಿಸುತ್ತಿz್ದÉÃವೆ. ಸುಮಾರು 8 ಸಾವಿರ ಜನರು ಗೃಹಜ್ಯೋತಿಯಿಂದ ವಂಚಿತಗೊಳಿಸಿದ್ದಾರೆ. ಈಗ ಅವರಿಗೆ ಕೇವಲ 57 ಯೂನಿಟ್ ವಿದ್ಯುತ್ ಮಾತ್ರ ಸಿಗಲಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬೀದರ್  ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಕಲಬುರಗಿ ಅಧ್ಯಕ್ಷ ಬಸವರಾಜ ಮಾಲಿಪಾಟೀಲ್, ಯಾದಗಿರಿ ಆಧ್ಯಕ್ಷ ಮಹ್ಮದ್ ನವಾಬ್, ಬಳ್ಳಾರಿ ಅಧ್ಯಕ್ಷ ಜಗನ್,ï ರಾಯಚೂರು ಅಧ್ಯಕ್ಷ ಅಲ್ಲಾಭಕ್ಷ, ರಾಜ್ಯ ಕಾರ್ಯದರ್ಶಿ ಅನ್ವರ್‌ಮಿಯಾ ಮೊದಲಾದವರಿದ್ದರು