ಪಾವಗಡ: ತಾಲೂಕಿನ ನಾಗಲಮಡಿಕೆ ಹೋಬಳಿಯ ಇಂಟೂರಾಯನಹಳ್ಳಿಯ ಹೊರವಲಯದಲ್ಲಿರುವ ಸೋಲಾರ್ ಪಾರ್ಕ್ನಲ್ಲಿ ಮಂಗಳವಾರ ಸಂಜೆ ವಿದ್ಯುತ್ ಉಪಸ್ಥಾವರಕ್ಕೆ ವಿದ್ಯುತ್ ಸರಬರಾಜು ಆಗುವ ಕೇಬಲ್ ಸ್ಫೋಟಗೊಂಡು ಎಲೆಕ್ಟ್ರಿಷಿಯನ್, ಟೆಕ್ನಿಷಿಯನ್ಗಳಿಗೆ ಸುಟ್ಟ ಗಾಯಗಳಾಗಿದೆ. ಇಂಟೂರಾಯನಹಳ್ಳಿ ಗ್ರಾಮದ ಮಹೇಂದ್ರ, ಚೇತನ್, ನಾಗೇಂದ್ರ, ಮಾಂತೇಶ್ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ತೀವ್ರವಾಗಿ ಗಾಯಗಳಾಗಿರುವ ನಾಗೇಂದ್ರ ಮತ್ತು ಮಾಂತೇಶ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿರುಮಣಿ ಪೊಲೀಸ್ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.