ಕೊಳ್ಳೇಗಾಲ: ವಿದ್ಯಾರ್ಥಿಗಳ ಪರೀಕ್ಷಾ ದೃಷ್ಟಿಯಿಂದ ವಿದ್ಯುತ್ ವ್ಯತ್ಯಯ ಆಗದಂತೆ ಕ್ರಮವಹಿಸಬೇಕು ಎಂದು ಉಪವಿಭಾಗಾಧಿಕಾರಿ ಗೀತಾ ಹುಡೇದ್ ಅವರಿಗೆ ರೈತ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಏಪ್ರಿಲ್ ಹಾಗೂ ಮೇ ತಿಂಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೇಸಿಗೆ ಕಾಲ ನೆಪವೊಡ್ಡಿ ಆಗಾಗ್ಗೆ ವಿದ್ಯುತ್ ಕಡಿತಗೊಳಿಸುವುದು ಸಾಮಾನ್ಯವಾಗಿದೆ. ವಿದ್ಯಾರ್ಥಿಗಳ ಓದಿಗೆ ಸಮಸ್ಯೆಯಾಗಿದೆ. ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ, ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕು. ರೈತರ ಬೆಳೆ ಒಣಗದಂತೆ ಕಾಪಾಡಿಕೊಳ್ಳಲು ವಿದ್ಯುತ್ ವ್ಯತ್ಯಯ ಆಗದಂತೆ ಕ್ರಮವಹಿಸಬೇಕು ಎಂದು ಕೋರಿದರು.
ಮುಂಗಾರು ಬೆಳೆಗೆ ರೈತರಿಗಾಗಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಬೇಕು. ನಂದಿನಿ ಹಾಲಿಗೆ ಪೈಪೋಟಿ ಒಡ್ಡಲು ರಾಜ್ಯಕ್ಕೆ ಗುಜರಾತ್‌ನ ಅಮುಲ್ ಹಾಲು ಮತ್ತು ಇತರ ಉತ್ಪನ್ನಗಳನ್ನು ಸರಬರಾಜು ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡ ಅಣಗಳ್ಳಿ ಬಸವರಾಜು, ರೈತ ಸಂಘದ ಅಧ್ಯಕ್ಷ ಷಣ್ಮುಖಸ್ವಾಮಿ, ಮೋಳೆ ರಾಮಕೃಷ್ಣ, ಉತ್ತಂಬಳ್ಳಿ ದಿವಾಕರ್, ಮಧುವನಹಳ್ಳಿ ಚಂದ್ರಪ್ಪ, ಮಧುವನಹಳ್ಳಿ ರವಿ, ಬಸವರಾಜು ಗುಂಡೇಗಾಲ, ಗಂಗಾಧರಸ್ವಾಮಿ, ರಾಜಣ್ಣ ಮೋಳೆ, ವೀರಭದ್ರಸ್ವಾಮಿ ಸರಗೂರು, ಕುಮಾರಸ್ವಾಮಿ ಸರಗೂರು, ಶಿವರಾಜ್ ಸರಗೂರು, ನಿರಂಜನ್ ಮೂರ್ತಿ, ನಾಗರಾಜು ಮುಳ್ಳೂರು ಇತರರು ಇದ್ದರು.