ಜಿಲ್ಲೆ

ವಿದ್ಯುತ್​ ಕಂಬದ ಸುತ್ತ ಗಿಡಗಂಟಿ ತೆರವು ಮಾಡಿ

ಗುಬ್ಬಿ: ತಾಲೂಕಿನ ಕೆಲವೆಡೆ ವಿದ್ಯುತ್​ ಕಂಬಗಳು ದುಸ್ಥಿಯಲ್ಲಿದ್ದರೆ, ಕೆಲವೆಡೆ ತಂತಿಗಳು ತೀರಾ ಕೆಳಮಟ್ಟದಲ್ಲಿ ಹಾದುಹೋಗಿವೆ. ಇನ್ನು ಹಲವೆಡೆ ವಿದ್ಯುತ್​ ಪರಿವರ್ತಕಗಳಿಗೆ ಸೂಕ್ತ ರೀತಿಯಲ್ಲಿ ತಂತಿಬೇಲಿಯನ್ನು ಅಳವಡಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗುಬ್ಬಿ ತಾಲೂಕಿನ ಬೆಣಚಿಗೆರೆ ಗ್ರಾಮದಲ್ಲಿ ವಿದ್ಯುತ್​ ಕಂಬಕ್ಕೆ ಬಳ್ಳಿಗಳು ಬೆಳೆದಿರುವುದರಿಂದ ಗಾಳಿ ಬಿಸಿದರೆ ಸಾಕು ವಿದ್ಯುತ್​ ಸರಬರಾಜಿನಲ್ಲಿ ತೊಂದರೆ ಉಂಟಾಗುತ್ತಿದೆ. ಗ್ರಾಮ, ತೋಟಗಳಲ್ಲಿ ವಿದ್ಯುತ್​ ತಂತಿಗಳು ತೀರಾ ಕೆಳಮಟ್ಟದಲ್ಲಿ ಹಾದು ಹೋಗಿದ್ದು, ಕೈಗೆ ಎಟಕುವ ಸ್ಥಿತಿಯಲ್ಲಿದೆ. ಹಲವೆಡೆ ಹಳೆಯ ತಂತಿಗಳನ್ನು ಎಳೆದಿರುವುದರಿಂದ ಮಳೆಗಾಲದಲ್ಲಿ ಗಾಳಿ ಮಳೆಗೆ ಮರ ಹಾಗೂ ಕೊಂಬೆಗಳು ವಿದ್ಯುತ್​ ಕಂಬ ಹಾಗೂ ತಂತಿಗಳ ಮೇಲೆ ಬಿದ್ದು ತಂತಿ ತುಂಡಾಗುವ ಘಟನೆ ಹೆಚ್ಚಾಗಿದೆ. ಇದರಿಂದ ರೈತರು, ಜಾನುವಾರುಗಳು ಜೀವನ ಕಳೆದುಕೊಳ್ಳುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಸಮಸ್ಯೆ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿದ್ಯುತ್​ ಪರಿವರ್ತಕಗಳು ಹಾಗೂ ವಿದ್ಯುತ್​ ಕಂಬಗಳಿಗೆ ಬಳ್ಳಿಗಳು ಬೆಳೆದುಕೊಂಡಿರುವುದು ನಮ್ಮ ಗಮನಕ್ಕೆ ಬಂದರೆ ತಕ್ಷಣ ತಗಿಸುತ್ತೇವೆ. ಸಾರ್ವಜನಿಕರಿಗೆ ತೊಂದರೆಯಾಗುವಂತಿರುವ ವಿದ್ಯುತ್​ ಕಂಬ ಮತ್ತು ತಂತಿ ಸರಿಪಡಿಸಲಾಗುವುದು.

| ಸಿದ್ದೇಗೌಡ ಎಇಇ ಬೆಸ್ಕಾಂ ಇಲಾಖೆ ನಿಟ್ಟೂರು