ಜಿಲ್ಲೆ

ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಭೂಮಿಪೂಜೆ

ಚಾಮರಾಜನಗರ: ತಾಲೂಕಿನ ವೀರನಪುರ ಕ್ರಾಸ್ ಬಳಿಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ವಿದ್ಯುತ್ ಉಪಕೇಂದ್ರ ಸ್ಥಾಪನೆಗಾಗಿ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು.

ಇದೇ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗಗಳಿಗೆ ಸಮಪರ್ಕ ವಿದ್ಯುತ್ ಒದಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ದೇವಲಾಪುರ, ಉಗನೇದಹುಂಡಿ, ವೀರನಪುರ, ಉಡಿಗಾಲ, ಕಾಳನಹುಂಡಿ ಮತ್ತು ಇನ್ನಿತರೆ ಗ್ರಾಮಗಳಿಗೆ ವಿದ್ಯುತ್ ಒದಗಿಸಲು ವಿದ್ಯುತ್ ಉಪಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸೆಸ್ಕ್ ಇಇ ಪ್ರೀತಂ, ಎಇಇಗಳಾದ ಚೇತನ್, ವಿನೋದ್ ಕುಮಾರ್ ಸಿಂಗ್, ಆನಂದ್ ಕುಮಾರ್ ಇತರರು ಹಾಜರಿದ್ದರು.