ಜಿಲ್ಲೆ

ವಿದ್ಯಾವರ್ಧಕ ಕಾನೂನು ಕಾಲೇಜಿಗೆ ಬಿ+ ಮಾನ್ಯತೆ

ಮೈಸೂರು: ವಿದ್ಯಾವರ್ಧಕ ಕಾನೂನು ಕಾಲೇಜಿಗೆ ನ್ಯಾಕ್ ಸಮಿತಿಯಿಂದ ಬಿ+ ಮಾನ್ಯತೆ ಲಭಿಸಿದೆ.

ಕಾಲೇಜಿಗೆ ನ್ಯಾಕ್ ತಂಡವು ಇತ್ತೀಚಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ನ್ಯಾಕ್ ತಂಡದಲ್ಲಿ ಒರಿಸ್ಸಾದ ಪ್ರೊ.ಡಾಲಿ ಜಬ್ಬಲ್‌ಲ್ ಉತ್ತರಪ್ರದೇಶದ ಪ್ರೊ.ಮೊಹಮ್ಮದ್ ತಾರೀಖ್, ನವದೆಹಲಿಯ ಪ್ರೊ.ರಜಿನಿ ಮಲ್ಹೋತ್ರ ಡಿಂಗ್ರ ಅವರು ಕಾಲೇಜಿನ ಸಮಗ್ರ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣೆಗೆಯ ಸ್ವರೂಪದ ಸಮಗ್ರ ಮಾಹಿತಿ ಪಡೆದಿದ್ದರು.

ನ್ಯಾಕ್ ಸದಸ್ಯರಿಗೆ ಕಾಲೇಜಿನ ಪ್ರಾಂಶುಪಾಲೆ ಡಾ.ಪಿ.ದೀಪು, ಸಂಯೋಜಕಿ .ಡಾ.ಶ್ರೀದೇವಿ ಕೃಷ್ಣ ಅವರು ಕಾಲೇಜಿನ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು.

ಸುವರ್ಣಮಹೋತ್ಸವ ಆಚರಣೆ ಸಂದರ್ಭದಲ್ಲಿ ಕಾಲೇಜಿಗೆ ಈ ರ‌್ಯಾಂಕ್ ದೊರೆತಿದೆ. ಕಾಲೇಜಿನ ವಾತಾವರಣ, ವಿದ್ಯಾರ್ಥಿಗಳಿಗೆ ಕಾಲೇಜಿನ ಸೌಕರ್ಯ, ಬೋಧನಾ ಕೌಶಲ, ವಿದ್ಯಾರ್ಥಿಗಳ ಚಟುವಟಿಕೆ, ಗ್ರಂಥಾಲಯ ವ್ಯವಸ್ಥೆ, ಕಾಲೇಜಿನ ಅಡಳಿತ ವ್ಯವಸ್ಥೆ, ಶಿಸ್ತು, ಹಲವಾರು ವಿಚಾರಗಳನ್ನು ಪರಿಶೀಲಿಸಿದ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.