ಚಾಮರಾಜನಗರ: ಬೀಡಿ, ಗಣಿ ಮತ್ತು ಸಿನಿಮಾ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬೀಡಿ/ಸುಣ್ಣದ ಕಲ್ಲು ಮತ್ತು ಡಾಲಮೈಟ್ ಗಣಿ/ಕಬ್ಬಿಣ, ಕ್ರೋಮ್ ಮತ್ತು ಮ್ಯಾಂಗನೀಸ್ ಅದಿರು ಗಣಿ/ಸಿನಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಹಣಕಾಸಿನ ನೆರವು ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಆ.31 ಹಾಗೂ 11ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಅಕ್ಟೋಬರ್ 31 ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳ ಅರ್ಜಿಗಳನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ವೆಬ್‌ಸೈಟ್ ಮೂಲಕ ಸ್ವೀಕರಿಸಲಾಗುತ್ತದೆ. 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಉಡುಗೆ, ಸ್ಲೇಟ್, ಪುಸ್ತಕಗಳ ಖರೀದಿಗೆ 1 ಸಾವಿರ ರೂ. 5 ರಿಂದ 8ನೇ ತರಗತಿವರೆಗೆ 1500 ರೂ., 9 ರಿಂದ 10ನೇ ತರಗತಿವರೆಗೆ 2 ಸಾವಿರ ರೂ., 11 ರಿಂದ 12ನೇ ತರಗತಿವರೆಗೆ 3 ಸಾವಿರ ರೂ., ವೃತ್ತಿಪರೇತರ ಪದವಿ, ಸ್ನಾತಕೋತ್ತರ ಪದವಿ, ಡಿಪ್ರೋಮ ಕೋರ್ಸ್ ಅಂದರೆ ಬಿ.ಎ, ಬಿಎಸ್ಸಿ, ಬಿ.ಬಿ.ಎ, ಪಿ.ಜಿ.ಡಿ.ಸಿ.ಎ, ಬಿಎಸ್ಸಿ (ಅಗ್ರಿ) ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 6 ಸಾವಿರ ರೂ. ಆರ್ಥಿಕ ನೆರವು ನೀಡಲಾಗುವುದು. ವೃತ್ತಿಪರ ಪದವಿ ಅಂದರೆ ಬಿಇ, ಬಿಟೆಕ್, ಎಂಬಿಬಿಎಸ್, ಬಿಎಎಮ್‌ಎಸ್, ಎಂಸಿಎ, ಎಮ್‌ಬಿಎ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ಹಾಗೂ ಐ.ಟಿ.ಐ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ಸ್ಕೀಮ್‌ನಲ್ಲಿ 6 ಸಾವಿರ ರೂ. ನೀಡಲಾಗುವುದು. ಅರ್ಜಿ ಸಲ್ಲಿಕೆ ಹಾಗೂ ಪರಿಶೀಲಿಸುವ ಯಾವುದೇ ತಾಂತ್ರಿಕ ಸ್ಪಷ್ಟೀಕರಣವನ್ನು ಇ-ಮೇಲ್ ಐಡಿ ಅಥವಾ ಸಹಾಯವಾಣಿ ಸಂಖ್ಯೆ 0120-6619540ಗೆ ಸಂಪರ್ಕಿಸಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಛ್ಝಿಛಿಃ್ಞ.ಜಟ.ಜ್ಞಿ ಅಥವಾ ಸಹಾಯವಾಣಿ ಸಂಖ್ಯೆ 0120-6619540ಗೆ ಮೂಲಕ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.