ಚಿತ್ರದುರ್ಗ: ಬಂಜಾರ ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿರುವ ಬಂಜಾರ ಬಾಲಕಿಯರ ವಿದ್ಯಾರ್ಥಿನಿಲಯದ ಜಾಗವನ್ನು ಕೆಲವರು ಮಾರಾಟ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಸಮಾಜದ ಮುಖಂಡ ಆರ್. ನಿಂಗಾನಾಯ್ಕ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ತರಾಸು ರಂಗಮಂದಿರ ಬಳಿಯ ವಿದ್ಯಾರ್ಥಿನಿಲಯದ ಜಾಗದ ಮಾ ರಾಟಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಬದಲಾವಣೆಗೆ ನಗರಸಭೆಗೆ ಅರ್ಜಿ ಕೊಟ್ಟಿದ್ದಾರೆ. ಖಾತೆ ಬದಲಾವಣೆ ಮಾಡಬಾರದೆಂದು ಮನವಿ ಮಾಡಿದ್ದೇವೆ ಎಂದರು.
ತುಮಕೂರು, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಬಡ ವಿದ್ಯಾರ್ಥಿಗಳು ಇಲ್ಲಿ ಓದಲು ಅವಕಾಶವಿತ್ತು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವಿದ್ಯಾರ್ಥಿನಿಲಯದ ಜಾಗವನ್ನು ಯಾರು ಖರೀದಿ ಮಾಡಬಾರದು ಎಂದರು.
ಸೂರಗೊಂಡನಹಳ್ಳಿ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಈ ಜಾಗ ಮಾರಾಟಕ್ಕೆ ಯಾರಿಗೂ ಅವಕಾಶವಿಲ್ಲ. ಹಾಗಾಗಿ ಯಾರಾದರೂ ಈ ಜಾಗವನ್ನು ಖರೀದಿಸಿದರೆ ಮುಂದಾಗಬಹುದಾದ ನಷ್ಟಕ್ಕೆ ನಾವು ಹೊಣೆಗಾರರಲ್ಲ ಎಂದರು. ಶಂಕರ್‌ನಾಯ್ಕ, ರಮೇಶ್‌ನಾಯ್ಕ, ತಿಪ್ಪೇಶನಾಯ್ಕ, ಕುಬೇರನಾಯ್ಕ, ಬಾಲ್ಯಾನಾಯ್ಕ ಇದ್ದರು.