ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ(ನೀಟ್)ಪರೀಕ್ಷೆಯಲ್ಲಿ 17,267 ರ‌್ಯಾಂಕ್ ಪಡೆದಿರುವ ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಂ.ಮೇಘನಾ ಅವರಿಗೆ ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್. ದತ್ತೇಶ್ ಕುಮಾರ್ ಸಿಹಿ ತಿನಿಸಿ ಸನ್ಮಾನಿಸಿದರು. ಕೃಷ್ಣೇಗೌಡ, ರಾಮಕೃಷ್ಣ, ಜಗದೀಶ್ ಬಾಬು, ವಿನಯ್, ಕಮಲಾಕರ್, ಶರತ್, ಬಾಬು, ರಾಮಕೃಷ್ಣ, ಮೋಕ್ಷಾಗುಂಡ, ಬಾಬು ಇದ್ದರು.  
ಜಿಲ್ಲೆ

ವಿದ್ಯಾರ್ಥಿನಿ ಮೇಘನಾಗೆ ಸನ್ಮಾನ

ಕೊಳ್ಳೇಗಾಲ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ(ನೀಟ್)ಪರೀಕ್ಷೆಯಲ್ಲಿ 17,267 ರ‌್ಯಾಂಕ್ ಪಡೆದಿರುವ ಪಟ್ಟಣದ ನಿಸರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಂ.ಮೇಘನಾ ಅವರಿಗೆ ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್. ದತ್ತೇಶ್‌ಕುಮಾರ್ ಸಿಹಿ ತಿನಿಸಿ ಸನ್ಮಾನಿಸಿದರು.


17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ಎಂ.ಮೇಘನಾ 17, 267ನೇ ರ‌್ಯಾಂಕ್ ಹಾಗೂ ರಾಷ್ಟ್ರೀಯ ಮಟ್ಟದ ಹಿಂದುಳಿದ ವರ್ಗಗಳ ವಿಭಾಗದಲ್ಲಿ 7123ನೇ ರ‌್ಯಾಂಕ್ ಪಡೆದಿದ್ದಾಳೆ. 720 ಅಂಕಕ್ಕೆ 608 ಅಂಕ ಪಡೆದು ಕಾಲೇಜಿಗೆ ಹಿರಿಮೆ ತಂದಿದ್ದಾರೆ ಎಂದರು.


ನಿಸರ್ಗ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣೇಗೌಡ, ಸಂಯೋಜನಾಧಿಕಾರಿ ರಾಮಕೃಷ್ಣ, ಜೆಬಿ ಆಕಾಡೆಮಿ ಅಧ್ಯಕ್ಷ ಜಗದೀಶ್ ಬಾಬು, ಉಪನ್ಯಾಸಕರಾದ ವಿನಯ್, ಕಮಲಾಕರ್, ಶರತ್, ಜಾನ್ಸನ್ ಬಾಬು, ರಾಮಕೃಷ್ಣ, ಮೋಕ್ಷಾಗುಂಡ, ಬಾಬು ಮತ್ತಿತರರು ಇದ್ದರು.