ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ ರೋವರ್ ಘಟಕಗಳು ಹಾಗೂ ಮಡಿಕೇರಿಯ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದಲ್ಲಿ ರೇಂಜರ್ ಮತ್ತು ರೋವರ್‌ನ ಸ್ವಯಂ ಸೇವಕರಿಗೆ ಮೂರು ದಿನಗಳವರೆಗೆ ಆಯೋಜಿಸಿದ್ದ ಮೂಲ ತರಬೇತಿ ಕಾರ್ಯಾಗಾರವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಉದ್ಘಾಟಿಸಿದರು. ಜಿಮ್ಮಿ ಸಿಕ್ವೇರಾ, ಕೆ.ಪಿ.ಕುಸುಮಾ, ಡಾ.ಎಸ್.ಸುನೀಲ್‌ಕುಮಾರ್, ಪ್ರಾಂಶುಪಾಲ ಪಿ.ರಮೇಶ್ಚಂದ್ರ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಸಾಮಾಜಿಕ ಬದುಕಿನಿಂದ ವಿಮುಖ

ಕುಶಾಲನಗರ: ಇಂದು ವಿದ್ಯಾರ್ಥಿಗಳು ಸಾಮಾಜಿಕ ಬದುಕಿನಿಂದ ವಿಮುಖರಾಗುತ್ತಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಕಳವಳ ವ್ಯಕ್ತಪಡಿಸಿದರು.

ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ ರೋವರ್ ಘಟಕಗಳು ಹಾಗೂ ಮಡಿಕೇರಿಯ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದಲ್ಲಿ ರೇಂಜರ್ ಮತ್ತು ರೋವರ್‌ನ ಸ್ವಯಂ ಸೇವಕರಿಗೆ ಆಯೋಜಿಸಿದ್ದ ಮೂರು ದಿನಗಳ ಮೂಲ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಬದುಕಬೇಕಿರುವುದು ಸಮಾಜದೊಳಗೆ. ಅಂತಹ ಸಮಾಜವನ್ನು ಆದರ್ಶಮಯವಾಗಿಡುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಈ ಕೆಲಸ ಯುವ ಸಮೂಹದಿಂದ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಸಮಾಜಮುಖಿಯಾಗಲು ರೇಂಜರ್ ಮತ್ತು ರೋವರ್ ಘಟಕಗಳು ವೇದಿಕೆಯಾಗಿವೆ. ಇದರ ಸದುಪಯೋಗವನ್ನು ಸ್ವಯಂ ಸೇವಕರು ಪಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ಸ್ಕೌಟ್ಸ್‌ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ ಇದ್ದಾಗ ಮಾತ್ರ ಸಾಧನೆಯ ಮೆಟ್ಟಿಲನ್ನೇರಬಹುದು ಎಂದರು.

ಜಿಲ್ಲಾ ಗೈಡ್ಸ್‌ನ ಸಹ ಆಯುಕ್ತೆ ಸುಲೋಚನಾ, ಜಿಲ್ಲಾ ಸಂಚಾಲಕಿ ದಮಯಂತಿ, ರೇಂಜರ್ ಘಟಕದ ಸಂಚಾಲಕ ಕೆ.ಪಿ.ಕುಸುಮಾ, ರೋವರ್ ಘಟಕದ ಸಂಚಾಲಕ ಡಾ.ಎಸ್.ಸುನೀಲ್‌ಕುಮಾರ್ ಉಪಸ್ಥಿತರಿದ್ದರು.
ಪ್ರಭಾರ ಪ್ರಾಂಶುಪಾಲ ಪಿ.ರಮೇಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಕಾರ್ಯಾಗಾರದಲ್ಲಿ ಕಾಲೇಜಿನ 50 ವಿದ್ಯಾರ್ಥಿಗಳು ಭಾಗವಹಿದ್ದಾರೆ.