ಕಬ್ಬೂರ: ಗ್ರಾಮೀಣ ಮಕ್ಕಳಿಗೆ ಉನ್ನತ ದರ್ಜೆಯ ಶೈಕ್ಷಣಿಕ ಸವಲತ್ತು ನೀಡಲು ಮಹೇಶ ಬೆಲ್ಲದ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಯರಗಟ್ಟಿ ಸರ್ಕಾರಿ ಕಾಲೇಜ್ ಪ್ರಭಾರಿ ಪ್ರಾಚಾರ್ಯ ಕಿರಣ ಚೌಗಲಾ ಹೇಳಿದರು.
ಪಟ್ಟಣದ ಬಿಜಿ ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಅನ್ನಪೂರ್ಣಾ ಬೆಲ್ಲದ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಧಕರ ಜೀವನ ವಿದ್ಯಾರ್ಥಿಗಳಿಗೆ ಯಾವತ್ತೂ ಮಾದರಿಯಾಗುತ್ತದೆ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆಯಬೇಕು. ಉನ್ನತ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು ಎಂದರು.
ಭಕ್ತಿ ಬಂಡವಾಡೆ, ವೈಭವಿ ಬಡಿಗೇರ, ಶಂಕರ ಜೀವನಿ, ಮಣಿಕಂಠ ಮಾನಗಾವಿ, ಶುಭಂ ಖಾಂಡೆಕಾರ, ಲಕ್ಷ್ಮೀ ಬೆಂಡವಾಡೆ ಅನಿಸಿಕೆ ವ್ಯಕ್ತಪಡಿಸಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
ಶಾಲೆ ಕಾರ್ಯದರ್ಶಿ ಡಾ. ಪ್ರಕಾಶ ಬೆಲ್ಲದ, ಪ್ರಾಂಶುಪಾಲ ಡಾ.ಮಹೇಂದ್ರ ಕೆ.ಆರ್., ಉಪಪ್ರಾಂಶುಪಾಲ ರಾಜು ಮಹಿಪತಿ, ಸಿದ್ದಪ್ಪ ಮುರಚಿಟ್ಟಿ, ಶ್ರೀನಿವಾಸ ಕೆರಿಮನಿ, ಬಸವರಾಜ ಕರನೂರಿ, ರಾಜು ತೊಳೆ, ಸುರೇಶ ಮಾದರ, ಮೈನಾ ಸುಂದರಿ ಪಾಟೀಲ, ಆರತಿ ಕುಲಕರ್ಣಿ, ಶಿವಾನಂದ ಚೌಗಲಾ, ಚೇತನ ಕಾಡೇಶಗೋಳ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.