ರಾಯಬಾಗ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಸಿದ್ದಾರ್ಥ ವಾಡೆನ್ನವ್ವರ. ಎಲ್.ಬಿ.ಚೌಗುಲೆ, ಎಸ್.ಎ.ನಾಂದಣಿ, ಎಸ್.ಎಸ್.ದಿಗ್ಗೇವಾಡಿ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಸಮಯದ ಲಾಭ ಪಡೆಯಿರಿ

ರಾಯಬಾಗ: ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶ ಸದುಪಯೋಗಪಡಿಸಿಕೊಂಡು ಯಶಸ್ಸಿನ ಶಿಖರ ಏರಬೇಕೆಂದು ಸಾಮಾಜಿಕ ಕಾರ್ಯಕರ್ತ ಸಿದ್ದಾರ್ಥ ವಾಡೆನ್ನವ್ವರ ಹೇಳಿದರು.

ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಸತೀಶ ಚೌಗುಲೆ ಪ.ಪೂ.ಕಾಲೇಜು ಹಾಗೂ ದಿಗ್ಗೇವಾಡಿಯ ಜಿ.ಬಿ.ಚೌಗುಲೆ ಪ.ಪೂ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುವ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮಹಾತ್ಮರ ಜೀವನವನ್ನು ಓದಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಏಕಾಗ್ರತೆ, ಶ್ರದ್ಧೆ ಹಾಗೂ ಸಮಯದ ಸದುಪಯೋಗ ಮಾಡಿಕೊಂಡು ನಿರ್ಧಿಷ್ಟ ಗುರಿಯನ್ನು ಯಶಸ್ವಿಯಾಗಿ ಮುಟ್ಟಬೇಕು. ಯಾವತ್ತೂ ಆಶಾವಾದಿಗಳಾಗಿರಬೇಕು. ಇತರರರಿಗೂ ಒಳ್ಳೆಯದನ್ನು ಮಾಡಬೇಕು. ಸಕಾರಾತ್ಮಕ ಚಿಂತನೆ ಮಾಡಿದರೆ ಯಶಸ್ಸು ದೊರಕುತ್ತದೆ ಎಂದರು.

ಸಂಸ್ಥೆ ಅಧ್ಯಕ್ಷ ಮತ್ತು ನ್ಯಾಯವಾದಿ ಎಲ್.ಬಿ.ಚೌಗುಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಬೇಕು. ಪ್ರತಿ ದಿನ ಅಧ್ಯಯನ ಮಾಡುತ್ತ, ನಿರಂತರ ಓದುವುದರಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯ ಎಸ್.ಎ.ನಾಂದಣಿ, ಎಸ್.ಎಸ್.ದಿಗ್ಗೇವಾಡಿ, ಆರ್.ವೈ.ಯಮಗಾರ, ಎಸ್.ಎಸ್.ದಿಗ್ಗೇವಾಡಿ ಇತರರಿದ್ದರು.