filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47; 
ಜಿಲ್ಲೆ

ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ಮಾಡಿದ್ದಾರೆ ಉತ್ತಮ ಭವಿಷ್ಯ

ಹಾಸನ: ವಿದ್ಯಾರ್ಥಿಗಳು ಇಂದು ಪರಿಶ್ರಮದಿಂದ ಅಭ್ಯಾಸ ನಡೆಸಿದರೆ ಮಾತ್ರ ಗೆಲುವು ನಿಮ್ಮ ಹಿಂಬಾಲಿಸುತ್ತದೆ. ಪ್ರತಿಯೊಬ್ಬರೂ ಸಹ ವರ್ತಮಾನವೆ ಭವಿಷ್ಯವನ್ನ ನಿರ್ಧರಿಸುತ್ತದೆ ಎಂಬ ಸತ್ಯವನ್ನ ಅರಿಯಬೇಕು ಎಂದು ಹಾಸನ ವಿಶ್ವವಿದ್ಯಾನಿಲಯ ಉಪ ಕುಲಪತಿ ಪ್ರೊ.ಟಿ.ಸಿ.ತಾರಾನಾಥ್ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ಕಲಿಕೆಗೆ ಎನ್ನುವುದು ನಿಂತ ನೀರಲ್ಲ, ಅದು ನಿರಂತರ. ಆದ್ದರಿಂದ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ನೀವು ಅಂದುಕೊಂಡ ಎಲ್ಲ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಪಯತ್ನಪಡಬೇಕು ಎಂದರು.
ಹಾಸನ ವಿಶ್ವವಿದ್ಯಾನಿಲಯ ಕುಲ ಸಚಿವ ಪ್ರೊ.ಪುಟ್ಟಸ್ವಾಮಿ ಮಾತನಾಡಿ, ಮಕ್ಕಳು ಪುಸ್ತಕದ ಹುಳುಗಳಾಗದೆ, ಮೊಬೈಲ್ ಬಳಕೆಗೆ ಹೆಚ್ಚು ಒತ್ತು ನೀಡದೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನ ತಾವು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಪೋಷಕರ ತ್ಯಾಗ, ಗೌರವ, ಪ್ರೀತಿಗೆ ಎಂದು ಚ್ಯುತಿಬಾರದಂತೆ ಬದುಕು ಸಾಗಿಸುವಂತಾಗಬೇಕು ಎಂದರೆ ಶ್ರಮ ಅಗತ್ಯ, ಕೌಶಲ್ಯ ಭರಿತ ಕೋರ್ಸ್‌ಗಳ ಅಭಿವೃದ್ದಿಗಾಗಿ ಈ ಕಾಲೇಜಿಗೆ ಸದಾ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್ ಮಾತನಾಡಿ, ಕಲಾ ಕಾಲೇಜು ತನ್ನದೇ ಆದ ರೀತಿಯಲ್ಲಿ ವೈಶಿಷ್ಯತೆಯನ್ನ ಒಳಗೊಂಡಿದ್ದೆ. ಈ ನಿಟ್ಟಿನಲ್ಲಿ ಕಾಲೇಜು ಶೈಕ್ಷಣಿಕ ಪ್ರಗತಿಗೆ ಹೊಸ ಕೋರ್ಸ್ ಅನ್ನು ಪರಿಚಯಿಸಿದ್ದು, ಮುಂದಿನ ದಿನಗಳಲ್ಲಿ ಸಂಶೋಧನಾ ಕೇಂದ್ರ ಪ್ರಾರಂಭಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಇದೆ ವೇಳೆ ವಿದ್ಯಾರ್ಥಿಗಳಿಗೆಂದು ಏರ್ಪಡಿಸಿದ್ದ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಈ ಹಿಂದಿನ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.ಉಪ ಕುಲಪತಿ ಪ್ರೊ.ಟಿ.ಸಿ.ತಾರಾನಾಥ್ , ಕುಲ ಸಚಿವ ಪ್ರೊ.ಪುಟ್ಟಸ್ವಾಮಿ ರವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಿ.ಎಸ್.ರಾಜು , ಪರೀಕ್ಷಾ ನಿಯಂತ್ರಕ ಡಾ.ಕೆ.ಡಿ.ಮುರಳೀಧರ್ , ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಯುವ ರೆಡ್ ಕ್ರಾಸ್ ಘಟಕ ಎಚ್.ಡಿ.ದೇವರಾಜ , ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಬಿ.ಎಚ್‌ಶ್ರೀನಿವಾಸ , ರಾ.ಸೆ.ಯೋ. ಕಾರ್ಯಕ್ರಮಾಧಿಕಾರಿ( ಘಟಕ-1) ಡಾ. ಕೆ.ವಿ.ಪಾರ್ಥೇಶ್, ದೈಹಿಕ ಶಿಕ್ಷಣ ನಿರ್ದೇಶಕ ಜೆ.ಕೆ.ಪವನ್, ಸ್ಕೌಟ್ಸ್ ಅಂಡ್ ಗೈಡ್ಸ್ ಡಾ.ಸಿ.ಸುರೇಶ ಮತ್ತು ಪ್ರಮೀಳಾ, ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಎನ್.ವಿ. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಇದ್ದರು.