ಕಟಕೋಳ ವಿದ್ಯಾವರ್ಧಕ ಸಮಿತಿಯಿಂದ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯ ಚಟುವಟಿಕೆಯನ್ನು ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು. ಪ್ರದೀಪ ಪಟ್ಟಣ, ಎಸ್.ಎನ್.ಸಿಂಗಾರಗೊಪ್ಪ, ಸತೀಶ ಜಿನಗಾ, ರಾಮನಗೌಡ ಹಟ್ಟಿ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಲಿ

ಕಟಕೋಳ: ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು, ಕಲಿಯುವ ವೇಳೆ ರಾಜಕೀಯ ಮಾಡಬಾರದು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಕಟಕೋಳ ವಿದ್ಯಾವರ್ಧಕ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ನಾಡು-ನುಡಿ ದೇಶಪ್ರೇಮ ಬೆಳೆಸಿಕೊಳ್ಳಬೇಕು. ತಾಲೂಕಿನ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸ್ಥಳೀಯವಾಗಿ ಗಾರ್ಮೆಂಟ್ಸ್ ನಿರ್ಮಿಸಿ ಅನುಕೂಲ ಕಲ್ಪಿಸುವ ಗುರಿ ಹೊಂದಿದ್ದೇನೆ ಎಂದರು.

ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರದೀಪ ಪಟ್ಟಣ, ಎಸ್.ಎನ್.ಸಿಂಗಾರಗೊಪ್ಪ, ಸತೀಶ ಜಿನಗಾ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಮಿತಿ
ಅಧ್ಯಕ್ಷ ರಾಯಪ್ಪ ಕತ್ತಿ, ಎ.ಸಿ.ಸುರಗ, ಕಾರ್ಯದರ್ಶಿ ಸಿ.ಬಿ.ಕಳಸಪ್ಪನವರ, ನಿರ್ದೇಶಕರಾದ ಎಂ.ಎಂ.ಆತಾರ, ಸಿ.ಎ.ದೇಸಾಯಿ, ಎನ್.ಬಿ.ತೋಡಕರ, ನವೀಣ ನಲವಡೆ, ಶ್ರೀಕಾಂತ ಢವಣ, ಉಪನ್ಯಾಸಕಿ ರೂಪಾ ಬನಶೆಟ್ಟಿ, ರಮೇಶ ಬಾರಕೇರ, ಡಾ.ಪಿ.ಕೆ.ರಾಠೂಡ, ಆರ್.ಡಿ.ಗೊರವರ, ಪ್ರಾಚಾರ್ಯ ಎನ್.ಡಿ.ಪಾಟೀಲ, ಶಂಕರ ಹುಣಶೀಕಟ್ಟಿ, ಎನ್.ಎಂ.ಜಾಲಿಮರದ ಇತರರಿದ್ದರು.