ಜಿಲ್ಲೆ

ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲಿ

ಕುಡಚಿ: ತಂದೆ-ತಾಯಿಗಳ ಪೂರ್ವಜನ್ಮದ ಫಲ ಹಾಗೂ ದೇವರ ಕೃಪೆಯಿಂದ ಉತ್ತಮ ಮಕ್ಕಳು ಜನಿಸಲು ಸಾಧ್ಯ ಎಂದು ರಾಯಬಾಗ ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಸುಟ್ಟಟ್ಟಿ ಕ್ರಾಸ್ ಹತ್ತಿರದ ಶ್ರೀಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಎಸ್‌ವಿಕೆ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ, ಶ್ರೀರಾಮಕೃಷ್ಣ ಪರಮಹಂಸ ಕಲಾ ಹಾಗೂ ವಾಣಿಜ್ಯ ಪಪೂ ಕಾಲೇಜು, ಶ್ರೀಬಸವರಾಜ ಸಿದ್ದಪ್ಪ ಸನದಿ ಪದವಿ ಮಹಾವಿದ್ಯಾಲಯ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೮ನೇ ತರಗತಿ, ಪಿಯುಸಿ ಹಾಗೂ ಬಿಎ ಅಂತಿಮ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಈ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕೆಂದರು.

ಶ್ರೀಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಸನದಿ ಮಾತನಾಡಿ, ಸಂಸ್ಥೆಯಿAದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುತ್ತಿದೆ ಎಂದರು.

ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಬಾಪುಸಾಹೇಬ ತಾಶೇವಾಲೆ, ತಹಸೀಲ್ದಾರ್ ಸುರೇಶ ಮುಂಜೆ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ನಾಯಿಕ, ಬಿ.ಎಸ್.ಸನದಿ, ರತ್ನಾ ಬಾಳಪ್ಪನವರ, ರವೀಂದ್ರ ಪಾಟೀಲ, ಎಲ್.ಎಸ್.ಚೌರಿ, ವಿ.ಬಿ.ಚಿಕಬೀರಿ, ಅರುಣ ಐಹೊಳೆ, ಶ್ರೀಧರ ಮೂಡಲಗಿ, ಪ್ರಾಚಾರ್ಯ ಸಂತೋಷ ಸನದಿ, ಶ್ರೀದೇವಿ ಸನದಿ, ಸುರೇಶ ಸನದಿ, ಮಲಗೌಡ ಪಾಟೀಲ ಇತರರಿದ್ದರು.ಸಮಾರಂಭವನ್ನು ಶಾಸಕ ಡಿ.ಎಂ.ಐಹೊಳೆ ಉದ್ಘಾಟಿಸಿದರು. ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಬಾಪುಸಾಹೇಬ ತಾಶೇವಾಲೆ ಇತರರಿದ್ದರು.