ಸುರಪುರ: ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾದರಿ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಸಂಸ್ಥೆ ಕಾರ್ಯದರ್ಶಿ ಡಾ.ಆದಿಶೇಷ ನೀಲಗಾರ ಸಲಹೆ ನೀಡಿದರು.
ನಗರದ ಜನನಿ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿದ ಅವರು, ಕಾನೂನಿನ ಅರಿವು ಮತ್ತು ಮಹಿಳೆಯರು ಸಮಾಜದಲ್ಲಿ ಸ್ಪರ್ಧಾತ್ಮಕ, ಮಾನಸಿಕ ಹಾಗೂ ದೈಹಿಕವಾಗಿ ಸಶಕ್ತಗೊಳ್ಳುವ ಅಗತ್ಯವಿದೆ ಎಂದರು.
ವಿದ್ಯಾರ್ಥಿನಿಯರ ಹೆಚ್ಚಿನ ವಿದ್ಯಾಭ್ಯಾಸದಿಂದ ಕುಟುಂಬದ ಏಳಿಗೆ ಸಾಧ್ಯವಾಗಲಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನುಡಿಯಂತೆ ಹೆಣ್ಮಕ್ಕಳು ಹೆಚ್ಚೆಚ್ಚು ಓದಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಸಾಗಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲೆ ಬಸವರಾಜೇಶ್ವರಿ ಘಂಟಿ, ಉಪನ್ಯಾಸಕರಾದ ವೆಂಕಟೇಶ ಜಾಲಗಾರ, ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ಹಣಮಂತ್ರಾಯಗೌಡ, ಬೀರಲಿಂಗ ದೇವತ್ಕಲ್, ಶ್ರೀದೇವಿ ನಾಯಕ, ಜ್ಯೋತಿ, ಶೋಭಾ, ಅಶ್ವಿನಿ, ಬೋಧಕೇತರ ಸಿಬ್ಬಂದಿ ಶ್ರುತಿಗೌಡ, ರೂಪಾ, ಬಸವರಾಜ ಲೂಟಿ ಇತರರಿದ್ದರು.