ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಭಾರತ ಸ್ಕೌಟ್ ಹಾಗೂ ಗೈಡ್ಸ್, ಭಗತ್‌ಸಿಂಗ್ ರೋರ‍್ಸ ಘಟಕ, ರಾಣಿ ಚನ್ನಮ್ಮ ರೇಂರ‍್ಸ ಘಟಕಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಶಿಬಿರ ಬಾಗಲಕೋಟೆ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ದ ಕಾರ್ಯದರ್ಶಿ ಎಸ್.ಎಸ್.ದಳವಾಯಿ ಉದ್ಘಾಟಿಸಿದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಶಿಸ್ತು-ಕೌಶಲ ನೀಡುತ್ತದೆ

ಬಾಗಲಕೋಟೆ: ಸುಂದರ ಬದುಕು, ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಶಿಸ್ತು ಮತ್ತು ಕೌಶಲದ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳಿಗೆ ಶಿಸ್ತು ಹಾಗೂ ಕೌಶಲ ಸ್ಕೌಟ್ಸ್, ಗೈಡ್ಸನಿಂದ ಮಾತ್ರ ಸಿಗಲು ಸಾಧ್ಯ ಎಂದು ಬಾಗಲಕೋಟೆ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ದ ಕಾರ್ಯದರ್ಶಿ ಎಸ್.ಎಸ್.ದಳವಾಯಿ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಭಾರತ ಸ್ಕೌಟ್ ಹಾಗೂ ಗೈಡ್ಸ್, ಭಗತ್‌ಸಿಂಗ್ ರೋರ‍್ಸ ಘಟಕ, ರಾಣಿ ಚನ್ನಮ್ಮ ರೇಂರ‍್ಸ ಘಟಕಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಮಾನವೀಯ ಮೌಲ್ಯಗಳೊಂದಿಗೆ ಸಮಾಜ ಸೇವೆ, ದೇಶ ಸೇವೆ ಮಾಡುವ ಹಾಗೆ ಪ್ರೇರೆಪಿಸುವ ಕಾರ್ಯ ಈ ಘಟಕಗಳಿಂದ ನಡೆಯುತ್ತದೆ ಎಂದರು.

ಜಿಲ್ಲಾ ಸಂಘಟಕ ಪಿ.ಕೆ.ಚೌಗಲಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಽಸಲು ಸಾಧ್ಯ. ಪ್ರಮಾಣಿಕವಾಗಿ ನಿಸ್ವಾರ್ಥ ಭಾವನೆಯಿಂದ ದೇಶ ಸೇವೆ, ಸಾಮಾಜಿಕ ಸೇವೆ, ಪರಿಸರ ಜಾಗೃತಿ, ಮತದಾನ ಜಾಗೃತಿ ಅಭಿಯಾನ ಮುಂತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳನ್ನು ಗುರುತಿಸಿ, ಅಯ್ಕೆಮಾಡಿ ನಿಪುಣ ಪುರಷ್ಕಾರ, ರಾಜ್ಯ ಪುರಷ್ಕಾರ, ರಾಷ್ಟ್ರಪತಿ ಪುರಷ್ಕಾರಗಳು, ಪ್ರಶಸ್ತಿ ಪತ್ರಗಳನ್ನು ವಿತರಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ.ಜಗನಾಥ ಚವ್ಹಾಣ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ಗಳು ಶಿಸ್ತು ಬದ್ಧ ಘಟಕಗಳಾಗಿದ್ದು, ದೇವರ ಮತ್ತು ದೇಶಸೇವೆ ಮಾಡುವಲ್ಲಿ ಇವುಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಹೆಚ್ಚಾಗಬೇಕು. ಪರಿಸರ ಜಾಗೃತಿ, ಸ್ವಚ್ಛತೆ ಅತ್ಯಂತ ಮಹತ್ವದ್ದು, ಪರಿಸರ ಉಳಿಸಿ-ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಮುಂದಿನ ಪೀಳಿಗೆಗೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಕೆಲಸ ಸ್ಕೌಟ್ಸ್ ಮತ್ತು ಗೈಡ್ಸ್ನಿಂದಾಗಬೇಕು. ಮನುಷ್ಯನಿಗೆ ಸಂತೋಷ ಮತ್ತು ಆನಂದ ಇಲ್ಲಿ ಸಿಗುತ್ತದೆ. ಪ್ರಾಮಾಣಿಕ ಸೇವಾ ಮನೋಭಾವನೆ ಬೆಳಸಿಕೊಂಡಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪುರಸ್ಕಾರಗಳು ನಿಮ್ಮನ್ನು ಅರಸಿಕೊಂಡಿವೆ ಎಂದು ತಿಳಿಸಿದರು.

ಹಿರಿಯ ಪ್ರಾಧ್ಯಾಪಕ ಡಾ.ಎಂ.ನಂಜುಂಡಸ್ವಾಮಿ ಮಾತನಾಡಿ, ಈ ಘಟಕಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾಷೆ, ಜಾತಿ ಧರ್ಮ ಮೀರಿ ದೇಶದ ಅಭಿವದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಐಕ್ಯೂಎಸಿ ಸಂಯೋಜಕಿ ಪ್ರೊ.ಜಿ.ಎಂ. ನಾವದಗಿ, ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಪಿ.ಎನ್.ರಾಥೋಡ, ಪ್ರೊ. ರಾಮಕೃಷ್ಣ ತ್ಯಾಪಿ, ಪ್ರೊ.ಎಂ.ಎಚ್.ಜನ್ನಪ್ಪಗೋಳ, ಡಾ.ಬಿ.ವಿ.ಖೋತ, ಪ್ರೊ.ರವಿ ಬೆಳಗೆರಿ ಉಪಸ್ಥಿತರಿದ್ದರು. ಎಸ್.ಐ.ಪತ್ತಾರ ಸ್ವಾಗತಿಸಿದರು. ಐ.ಕೆ. ಮಠದ ವಂದಿಸಿದರು. ಲಕ್ಷಿ÷್ಮÃ ಅರೇನಾಡ ನಿರೂಪಿಸಿದರು.