ಜಿಲ್ಲೆ

ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳು ವರದಾನ

ಗೌರಿಬಿದನೂರು : ಸಕಲ ಸೌಲಭ್ಯಗಳನ್ನು ಒಳಗೊಂಡ ವಸತಿ ಶಾಲೆಗಳು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ವರದಾನವಾಗಲಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ತಾಲೂಕಿನ ಮಲ್ಲಸಂದ್ರದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ವಸತಿಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರವೇ ಒದಗಿಸಲಿದೆ, ಆದ್ದರಿಂದ ಈ ಶಾಲೆಯ ನಿರ್ಮಾಣದಿಂದ ತೊಂಡೇಬಾವಿ ಹಾಗೂ ಹೊಸೂರು ಹೋಬಳಿ ವ್ಯಾಪ್ತಿಯ ಪ್ರತಿಭಾವಂತ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರನಿಗೆ ತಾಕೀತು ಮಾಡಿದರು.

ಶಾಸಕರ ಶ್ರಮದ ಲವಾಗಿ ಇಂದು ಕ್ಷೇತ್ರದಲ್ಲಿ ಹತ್ತಾರು ಸರ್ಕಾರಿ ವಸತಿ ಶಾಲೆಗಳು ಪ್ರಾರಂಭವಾಗಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿವೆ ಎಂದು ಜಿಪಂ ಸದಸ್ಯೆ ಸರಸ್ವತಮ್ಮಅಶ್ವತ್ಥನಾರಾಯಣಗೌಡ ಬಣ್ಣಿಸಿದರು.

ತಾಪಂ ಸದಸ್ಯ ಎಂ.ಸಿ ಗಂಗಪ್ಪ, ಮುಖಂಡರಾದ ಜೆ.ಚಂದ್ರಶೇಖರ್, ಶ್ರೀನಿವಾಸರೆಡ್ಡಿ, ಕಲ್ಲಿನಾಯಕನಹಳ್ಳಿ ಮುನಿಯಪ್ಪ ಇತರರಿದ್ದರು.