ಚಿತ್ರದುರ್ಗ: ಎಸ್‌ಜೆಎಂ ವಿದ್ಯಾಪೀಠದ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರು ನಗರದಲ್ಲಿ ಪಾಲಿಟೆಕ್ನಿಕ್ ಕಾಲೇಜನ್ನು 1985ರಲ್ಲಿ ಸ್ಥಾಪಿಸಿದ್ದು, ನಿರಂತರ 38 ವರ್ಷಗಳ ಕಾಲೇಜು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದು ನಿವೃತ್ತ ಪ್ರಾಚಾರ‌್ಯ ಡಿ.ವಿ. ಮುರುಗೇಶ್ ಹೇಳಿದರು.
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಹಳೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಅನುಭವ ಈಗಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಲಿ ಎಂದರು.
ಆಟೋಮೊಬೈಲ್ ವಿಭಾಗದ ಹಿರಿಯ ಪ್ರಾಧ್ಯಾಪಕ ಬಿ.ಎಲ್.ಶಿವಾನಂದಸ್ವಾಮಿ, ಸಂಘದ ಕಾರ್ಯದರ್ಶಿ ಎಸ್.ಜಿ ವೆಂಕಟೇಶ್, ಉಪಾಧ್ಯಕ್ಷ ಎಸ್.ಜಿ.ಸತ್ಯನಾರಾಯಣನಾಯ್ಡು, ಖಜಾಂಚಿ ಕೆ.ಸಿ.ಸುರೇಶ್, ನಿರ್ದೇಶಕರಾದ ಎನ್.ಜಿ.ಹನುಮಂತರೆಡ್ಡಿ, ಎಂ.ಸಿ.ಹಿಮವತ್ ಕೇದಾರ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯಎಸ್.ವಿ.ರವಿಶಂಕರ್ ಮಾತನಾಡಿದರು.
ನಿರ್ದೇಶಕರಾದ ಪಿ.ಜಯಪ್ಪ, ಎಸ್.ನಾಗಭೂಷಣ, ಜಿ.ಕೆ.ಸುಧಾ, ಅಧ್ಯಾಪಕರಾದ ಎಸ್.ಜಿ.ಲತಾ, ಜೆ.ಪ್ರತಿಮಾ, ಸವಿತಾ, ಮೋಹನ್, ಎನ್‌ಎಸ್‌ಎಸ್ ಅಧಿಕಾರಿ ಟಿ.ಗೋವಿಂದರಾಜು, ಪಿ.ಎ.ರಘು, ನಳಿನಾಕ್ಷಿ, ಸಿ.ಎನ್.ಮೋಹನ್, ಎಂ.ವೀರಯ್ಯ ಮತ್ತಿತರರು ಇದ್ದರು.
ಹಳೇ ವಿದ್ಯಾರ್ಥಿ ಪ್ರಸಾದ್ ಸಂಘಕ್ಕೆ 25 ಸಾವಿರ ರೂ. ದೇಣಿಗೆ ನೀಡಿದರು. ಟಿ.ಲಿಂಗರಾಜು ಪ್ರಾರ್ಥಿಸಿದರು. ಎಚ್.ಸಿ.ಪದ್ಮಾವತಿ ಸ್ವಾಗತಿಸಿದರು. ಪಿ.ಬಿ.ರಾಜೇಶ್‌ಕುಮಾರ್ ನಿರೂಪಿಸಿದರು.