ಜಿಲ್ಲೆ

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ


ಚಿತ್ರದುರ್ಗ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ, ಅರಣ್ಯ, ಶಿಕ್ಷಣ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಲಾ ಚೈತನ್ಯ ಸೇವಾಸಂಸ್ಥೆಯಿಂದ ಕ್ರೀಡಾ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾರೋಪದಲ್ಲಿ ಬಹುಮಾನ ವಿತರಿಸಲಾಯಿತು.

ಪ್ರಬಂಧ ಸ್ಪರ್ಧೆ 8ನೇ ತರಗತಿ ವಿಭಾಗದಲ್ಲಿ ಎಸ್.ದೀನಾ ಜೈನ್, ಎಸ್.ವಸುಂಧರ, ಪಿ.ಶಿಲ್ಪಾ, ಬಿ.ಕಾವೇರಿ, 9ನೇ ತರಗತಿ ವಿಭಾಗದಲ್ಲಿ ಎ.ಎಂ.ಸಮೀಕ್ಷಾ, ಪಿ.ಸಿ.ಬಿಂದು, ಸಿ.ಎನ್.ಜೀವಿಕಾ, ಕೆ.ಸಂಗೀತಾ, ಎಸ್ಸೆಸ್ಸೆಲ್ಸಿ ವಿಭಾಗದಲ್ಲಿ ಬಿ.ಎಚ್.ಲತಾ, ಎಲ್.ಧನುಶ್ರೀ, ಎಸ್.ಪಿ.ತನುಶ್ರೀ, ಜಿ.ಸ್ಪೂರ್ತಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ 4ನೇ ಸ್ಥಾನ ಪಡೆದಿದ್ದಾರೆ.

ಚಿತ್ರಕಲಾ ಸ್ಪರ್ಧೆ 8ನೇ ತರಗತಿ ವಿಭಾಗದಲ್ಲಿ ಪವನ್, ಎಸ್.ಕೆ.ಸಾಂಪ್ರತ, ಎಸ್.ಸಿ.ಭಾವನಾ, ಎನ್.ನಿವೇದಿತಾ, 9ನೇ ತರಗತಿ ವಿಭಾಗದಲ್ಲಿ ಎಸ್.ವರುಣ್, ಸಾನ್ವಿ, ಎ.ಭರತ, ಗೌಸಿಯಾ ಜಹೋರಾ, ಎಸ್ಸೆಸ್ಸೆಲ್ಸಿ ವಿಭಾಗದಲ್ಲಿ ಉಷಾ, ಬಿ.ಎನ್.ಮಲೇಶ್, ರಫೀಜಾ ತಬಸ್ಸುಮ್, ನವೀನ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ 4ನೇ ಸ್ಥಾನ ಪಡೆದಿದ್ದಾರೆ.

ಇದೇ ವೇಳೆ ಪರಿಸರಸ್ನೇಹಿ ಬಟ್ಟೆ ಬ್ಯಾಗ್ ವಿತರಿಸಲಾಯಿತು. ಮಂಡಳಿಯ ಚಿತ್ರದುರ್ಗ ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ ನಾಯಕ್, ಶಿಕ್ಷಣ ಇಲಾಖೆ ತಿಪ್ಪೇಸ್ವಾಮಿ, ಪರಿಸರ ಅಧಿಕಾರಿ ಈ.ರಮೇಶ್, ಕಲಾ ಚೈತನ್ಯ ಸೇವಾಸಂಸ್ಥೆ ಕಾರ್ಯದರ್ಶಿ ನಾಗರಾಜ್ ಬೇದ್ರೆ, ಪರಿಸರಾಧಿಕಾರಿ ಪಿ.ರಾಜೇಶ್ ಇತರರಿದ್ದರು.