ಮಾರಗೌಡನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ರೋಟರಿ ಸಂಸ್ಥೆ ವಿದ್ಯಾರ್ಥಿಗಳಿಗೆ ತೆಂಗಿನ ಸಸಿ ವಿತರಿಸಲಾಯಿತು. 30ಡಿ02 ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ತೆಂಗಿನ ಸಸಿ ವಿತರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ತಂಗಿನ ಸಸಿ ವಿತರಣೆ

ಹಲಗೂರು: ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ ಎರಡು ತಂಗಿನ ಸಸಿಗಳನ್ನು ವಿತರಿಸಲಾಯಿತು.

ಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಬೆಂಗಳೂರು ಕಲ್ಪವೃಕ್ಷ ಮತ್ತು ರೋಟರಿ ಸಂಸ್ಥೆಯ ಅಧ್ಯಕ್ಷ ಮಹಾದೇವ್ ಪ್ರಸಾದ್ ಉದ್ಘಾಟಿಸಿ ಮಾತನಾಡಿದರು.

ನಾವು ನೀಡಿರುವ ಸಸಿಗಳನ್ನು ಜೋಪಾನವಾಗಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಒಂದು ನಿಮ್ಮ ವ್ಯಾಸಂಗಕ್ಕೆ, ಮತ್ತೊಂದು ನಿಮ್ಮ ಯಶಸ್ಸಿನ ಸೂಚಕವಾಗಿ ಸಸಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಹಲವಾರು ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಇಲ್ಲಿಯೂ ಒಂದು ಕ್ಲಬ್ ಪ್ರಾರಂಭಿಸಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಮಾಡಬಹುದು. ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುತ್ತಾರೆ. ಮಕ್ಕಳಿಗೆ ಪರಿಸರ ಪ್ರಜ್ಞೆ ಅದರ ಬಗ್ಗೆ ಕಾಳಜಿಯನ್ನುಂಟು ಮಾಡುವುದು, ಸಾವಯವ ಕೃಷಿಯನ್ನು ಉತ್ತೇಜಿಸುವುದು ಇದರ ಸಸಿ ವಿತರಣೆ ಮೂಲ ಉದ್ದೇಶ ಎಂದರು.

ರೋಟರಿ ಸಂಸ್ಥೆಯ ಸದಸ್ಯ ರವಿಕುಮಾರ್ ಮಾತನಾಡಿದರು. ಮುಖ್ಯ ಶಿಕ್ಷಕಿ ಶಕುಂತಲಾ, ರೋಟರಿ ವಲಯ ಪ್ರಾಂತಪಾಲ ಬಿ.ಎಂ.ನಟರಾಜು, ಕೃಷಿ ಸಮಿತಿ ನಿರ್ದೇಶಕ ಅಕ್ಷಯ್ ಮಲ್ಲಪ್ಪ, ಸಮುದಾಯ ನಿರ್ದೇಶಕ ಕೃಷ್ಣಮೂರ್ತಿ, ರೋಟರಿ ಅಧ್ಯಕ್ಷೆ ಸುಪ್ರಿಯಾ, ಸಾವಯವ ಕೃಷಿ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್, ನಿವೃತ್ತ ಮುಖ್ಯಶಿಕ್ಷಕ ಎ.ಎಸ್.ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ನಂದೀಶ್, ಸದಸ್ಯರಾದ ರಾಜ, ಪುಟ್ಟರಾಜು, ಶಿವಕುಮಾರ್, ಕಪನೀಗೌಡ ಇತರರು ಇದ್ದರು.