ಜಿಲ್ಲೆ

ವಿದ್ಯಾರ್ಥಿಗಳಿಗೆ, ಕರೊನಾ ಸೇನಾನಿಗಳಿಗೆ ಸನ್ಮಾನ

ಶಿರಸಿ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳ ಜತೆ ಕರೊನಾ ಕಾರ್ಯಕರ್ತರನ್ನು ಗೌರವಿಸುವ ಮೂಲಕ 74ನೇ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಾಯಿತು.

ಶನಿವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಸನ್ನಿಧಿ ಹೆಗಡೆ, ಅರ್ಚನಾ ಶೆಟ್ಟಿ, ಅಖಿಲಾ ಹೆಗಡೆ, ಕರೊನಾ ವಾರಿಯರ್ಸ್ ಸತೀಶ ಭಟ್ಕಳ, ಮಂಜುನಾಥ ಪಟಗಾರ, ಶಾಂತಾರಾಮ ಶೆಟ್ಟಿ, ಯೋಗಿನಿ, ಅಣ್ಣಪ್ಪ ಶಂಕರಾಜ, ದೀಪಕ ನಾಡಗೌಡ, ಶ್ರೀಲೇಖಾ ವೈದ್ಯ, ಕಲ್ಪನಾ ನಾಯ್ಕ, ಶ್ರೀಕಾಂತ ಕನಶೆಟ್ಟಿ, ರಮೇಶ ಮುಚ್ಚುಂಡಿ, ಸುರೇಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಧ್ವಜಾರೋಹಣ ನೆರವೇರಿಸಿದರು. ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅನಂತ ಅಶೀಸರ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ, ತಹಸೀಲ್ದಾರ ಎಂ.ಆರ್. ಕುಲಕರ್ಣಿ, ಡಿಎಸ್​ಪಿ ಜಿ.ಟಿ. ನಾಯಕ, ಡಿಡಿಪಿಐ ದಿವಾಕರ ಶೆಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನಣ್ಣನವರ ಇತರರಿದ್ದರು.

*