ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಕುಶಾಲನಗರದ ವಾಸವಿ ಬಾಲಕಿಯರ ಸಂಘದ ವತಿಯಿಂದ ಸಮೀಪದ ಮಿಳಿಂದ ಸರ್ಕಾರಿ ಶಾಲೆಯ 30 ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಬಳಿಗಳನ್ನು ವಿತರಿಸಲಾಯಿತು. ಇಬ್ಬನಿ, ಸಾನ್ವಿ ಪ್ರವೀಣ್, ಜಯಶ್ರೀ ಕುಮಾರ್ ಇದ್ದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಕಂಬಳಿ ವಿತರಣೆ

ಕುಶಾಲನಗರ: ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಕುಶಾಲನಗರದ ವಾಸವಿ ಬಾಲಕಿಯರ ಸಂಘದ ವತಿಯಿಂದ ಸಮೀಪದ ಮಿಳಿಂದ ಸರ್ಕಾರಿ ಶಾಲೆಯ 30 ವಿದ್ಯಾರ್ಥಿಗಳಿಗೆ ಗುರುವಾರ ಕಂಬಳಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ ಮಾತನಾಡಿ, ಈಗ ಸಾಮಾನ್ಯಕ್ಕಿಂತ ಹೆಚ್ಚಿನ ಚಳಿಯಿದೆ. ಅನೇಕ ಬಡ ಕುಟುಂಬಗಳಿಗೆ ಕಂಬಳಿ ಇಲ್ಲದೆ ರಾತ್ರಿ ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ಅಂತಹ ಕುಟುಂಬದ ಮಕ್ಕಳನ್ನು ಗುರುತಿಸಿ ವಾಸವಿ ಬಾಲಕಿಯರ ಸಂಘ ಕಂಬಳಿ ನೀಡಿರುವುದು ಪ್ರಶಂಸನೀಯ ಎಂದರು.

ಶಾಲೆಯ 300 ವಿದ್ಯಾರ್ಥಿಗಳಿಗೆ ಬಿಸ್ಕತ್ತು ವಿತರಿಸಲಾಯಿತು. ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಪ್ರತಿಮಾ ರಾಘವೇಂದ್ರ, ಬಾಲಕಿಯರ ಸಂಘದ ಅಧ್ಯಕ್ಷೆ ಇಬ್ಬನಿ, ಕಾರ್ಯದರ್ಶಿ ಸಾನ್ವಿ ಪ್ರವೀಣ್, ಜಯಶ್ರೀ ಕುಮಾರ್, ಶಿಕ್ಷಕರು ಹಾಜರಿದ್ದರು.