ಬೇಲೂರು: ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನವನ್ನು ಕಲಿಸಿದರೆ ಇಂದಿನ ಡಿಜಿಟಲ್ ಯುಗದಲ್ಲಿ ವ್ಯವಸ್ಥಿತವಾಗಿ ಮುಂದೆ ಬಂದು ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅರೇಹಳ್ಳಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಚಾಮರಾಜ್ ಹೇಳಿದರು.
ಅರೇಹಳ್ಳಿ ಲಯನ್ಸ್ ಸಂಸ್ಥೆಯಿಂದ ತಾಲೂಕಿನ ಅರೇಹಳ್ಳಿ ಅನುಗ್ರಹ ಹಿರಿಯ ಪ್ರಾಥಮಿಕ ಶಾಲೆಗೆ 1.20 ಲಕ್ಷ ರೂ. ಬೆಲೆಯ 4 ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡಿ ಮಾತನಾಡಿದರು.
ನಮ್ಮ ಲಯನ್ಸ್ ಸಂಸ್ಥೆ ಸಮಾಜದಲ್ಲಿ ಸಾಕಷ್ಟು ಜನರಿಗೆ ಅನುಕೂಲವಾಗುವಂತಹ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಅದರಂತೆ ಇಲ್ಲಿನ ಅನುಗ್ರಹ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಮ್ಮ ಲಯನ್ಸ್ ಜಿಲ್ಲಾ ಮತ್ತು ಮಲ್ಟಿಪಲ್ ಸಹಕಾರದೊಂದಿಗೆ ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಇದರ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಇಂದಿನ ಡಿಜಿಟಲ್ ಯುಗಕ್ಕೆ ಹೊಂದಿಕೊಂಡು ಉತ್ತಮ ವಿದ್ಯಾಭ್ಯಾಸದೊಂದಿಗೆ ಜೀವನ ನಡೆಸಲು ಮುಂದಾಗಬೇಕು ಎಂದರು.
ಲಯನ್ಸ್ ಸಂಸ್ಥೆ ಪ್ರಾಂತಿಯ ಅಧ್ಯಕ್ಷ ಆಡಿ ನವೀನ್ ಚಂದ್ರಶೆಟ್ಟಿ, ವಲಯ ಅಧ್ಯಕ್ಷ ಸೋಮಯ್ಯ, ಕಾರ್ಯದರ್ಶಿ ಸಂತೋಷ್, ಖಜಾಂಚಿ ಪೃಥ್ವಿರಾಜ್ ಹಾಗೂ ಅರೇಹಳ್ಳಿ ಲಯನ್ಸ್ ಸಂಸ್ಥೆ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.