ಜಿಲ್ಲೆ

ವಿದ್ಯಾರ್ಥಿಗಳಿಗಾಗಿ ವಚನ ಸ್ಪರ್ಧೆ 4ರಂದು

ಕಲಬುರಗಿ: ಮಕ್ಕಳಲ್ಲಿ ವಚನಗಳ ಮಹತ್ವ ಅರಿಯಲು ಹಾಗೂ ವ್ಯಕ್ತಿತ್ವ ವಿಕಸನ ನಿಟ್ಟಿನಲ್ಲಿ ಸಮಾಧಾನ ಆಶ್ರಮದಲ್ಲಿ ಮೌನಯೋಗಿ ಶ್ರೀ ಜಡೆಯ ಶಾಂತಲಿAಗೇಶ್ವರ ಮಹಾಸ್ವಾಮಿಗಳ ನೇತೃತ್ವದ ಅ.೪ರಂದು ಶಾಲಾ ಮಕ್ಕಳಿಗೆ ವಚನಗಳ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಮಾಧಾನದ ಗುರುದೇವ ಸೇವಾ ಸಂಸ್ಥೆ ತಿಳಿಸಿದೆ. ಕ್ಷೇತ್ರ ಶಿP್ಷÀಣಾಧಿಕಾರಿಗಳ ಕಲಬುರಗಿ ದಕ್ಷಿಣ ಹಾಗೂ ಉತ್ತರ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ವಚನ ಸ್ಪರ್ಧೆ ಆಯೋಜಿಸಲಾಗಿದೆ. ೫ ರಿಂದ ೭ ಹಾಗೂ ೮ ರಿಂದ ೧೦ನೇ ತರಗತಿ ಎಂದು ಎರಡು ವಿಭಾಗ ಮಾಡಲಾಗಿದೆ. ವಚನ ಸ್ಪರ್ಧೆಗೆ ಪ್ರತಿ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಿಂದ ತಲಾ ಒಬ್ಬರನ್ನು ಆಯ್ಕೆಗೊಳಿಸಿ ಅ.೪ರಂದು ಬೆಳಗ್ಗೆ ೧೦ಕ್ಕೆ ಸಮಾಧಾನ ಆಶ್ರಮಕ್ಕೆ ಕಳಿಸಿ ಕೊಡಬೇಕು ಎಂದು ಕೋರಿದೆ. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ, ಸಮಾಧಾನಕಾರ ಬಹುಮಾನಗಳಿದ್ದು, ವಿಜೇತರಾಗುವ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಅ.೧೨ರಂದು ಸಮಾಧಾನದಲ್ಲಿ ಮೌನಯೋಗಿ ಶ್ರೀ ಜಡೆಯ ಶಾಂತಲಿAಗೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಬಹುಮಾನ ನೀಡಿ ಪುರಸ್ಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಕುಮಾರಶೆಟ್ಟಿ ಮೊ.೯೫೩೮೯೮೮೩೬೦, ಶರಣ ಪಾಟೀಲï ಮೊ.೮೧೨೩೩ ೦೭೭೭೯, ಶಿವರಾಯ ಮೊ.೮೯೭೧೨ ೯೩೧೨೦, ಸಂದೀಪ ಪಾಟೀಲï ಮೊ. ೯೦೩೬೬ ೩೫೧೩೫, ಸಂಗನಗೌಡ ಪಾಟೀಲ್ ಮೊ. ೯೯೦೨೦ ೫೬೪೧೭ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.