ಜಿಲ್ಲೆ

ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ

ಸೋಮವಾರಪೇಟೆ: ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮತದಾನ ಮಾಡಲು ಅರ್ಹರಾಗಿದ್ದು, ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಎಂದು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಕೆ.ಎಚ್. ಧನಲಕ್ಷ್ಮೀ ಹೇಳಿದರು.


ಮತದಾರರ ದಿನದ ಅಂಗವಾಗಿ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ಜಾಥಾದಲ್ಲಿ ಅವರು ಮಾತನಾಡಿದರು.
ಹದಿನೆಂಟು ವರ್ಷ ತುಂಬಿದವರು ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸದಿದ್ದಲ್ಲಿ ಶೀಘ್ರ ಹೆಸರು ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಪ್ರಾಂಶುಪಾಲ ಪ್ರೊ.ಎಚ್.ಎನ್.ರಾಜು, ಪ್ರಾಧ್ಯಾಪಕರಾದ ಎಂ.ಎಸ್.ಶಿವಮೂರ್ತಿ, ಉಪನ್ಯಾಸಕರಾದ ಎಂ.ಎಸ್.ಸುನೀಲ್, ಬಿ.ಎಸ್.ದೇವರಾಜು, ಸಚಿನ್, ಸಿದ್ದೇಶ್, ಫೌಜಿಯಾ, ವಿಂದ್ಯಾ ಇದ್ದರು.