ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾವನ್ನು ವಿದ್ಯಾರ್ಥಿನಿಯರು ಉದ್ಘಾಟಿಸಿದರು. ಡಯಟ್​ ಪ್ರಾಚಾರ್ಯ ಎಸ್​.ಡಿ ಗಾಂಜಿ, ಬಸವರಾಜ ನಾಲತವಾಡ, ಎಚ್​.ಎಂ.ಚೆನ್ನಪ್ಪಗೋಳ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಸ್ಪರ್ಧಾಭಾವ ಬೆಳೆಸಿ

ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಸುಧಾರಣೆ ಜತೆಯಲ್ಲೇ ಬೌದ್ಧಿಕ ಮತ್ತು ಸ್ಪರ್ಧಾತ್ಮಕವಾಗಿ ಬೆಳೆಸುವುದು ಮತ್ತು ಉಜ್ವಲ ಭವಿಷ್ಯಕ್ಕೆ ಪ್ರೇರಣೆ ನೀಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಡಯಟ್​ ಪ್ರಾಚಾರ್ಯ ಎಸ್​.ಡಿ ಗಾಂಜಿ ಹೇಳಿದರು.

ಬೆಳಗಾವಿಯ ಲಿಂಗರಾಜ ಕಾಲೇಜಿನ ಕೇಂದ್ರ ಸಭಾಗೃಹದಲ್ಲಿ ಡಿಎಸ್​ಇಆರ್​ಟಿ, ಡಯಟ್​ ಹಾಗೂ ಯೂತ್​ ಫಾರ್​ ಸೇವಾ ಸಂಸ್ಥೆ ಸಹಯೋಗದಲ್ಲಿ ಗಣಿತ ಶಿಕರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಎನ್​ಎಂಎಂಎಸ್​ ಪರೀೆಯ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರತಿಭಾವಂತ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಸುವ ಎನ್​ಎಂಎಂಎಸ್​ ಶಿಷ್ಯವೇತನದ ಸ್ಪರ್ಧಾ ಪರೀೆಗಳಿಗೆ ಹೆಚ್ಚಿನ ಮಕ್ಕಳನ್ನು ತಯಾರಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ವಿಶೇಷ ಕಾಳಜಿ ವಹಿಸಿಕೊಳ್ಳಬೇಕಿದೆ ಎಂದರು.

ಅಧ್ಯತೆ ವಹಿಸಿದ್ದ ಉಪನ್ಯಾಸಕ ಎಚ್​.ಎಂ. ಚೆನ್ನಪ್ಪಗೋಳ ಮಾತನಾಡಿ, ಭವಿಷ್ಯದಲ್ಲಿ ಮಕ್ಕಳು ಒಳ್ಳೆಯದನ್ನು ಪಡೆಯಲು ಸ್ಪರ್ಧಾತ್ಮಕವಾಗಿ ಬೆಳೆಯಬೇಕು. ಆ ನಿಟ್ಟಿನಲ್ಲಿ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿರುವ ಕಾರ್ಯ ಶ್ಲಾನೀಯ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಲಾಖೆಯೊಂದಿಗೆ ಕೈಜೋಡಿಸಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಸಹ ಶಿಣದ ಬಲವರ್ಧನೆಗೆ ಸಹಕಾರಿ ಆಗುತ್ತಿವೆ ಎಂದು ಹೇಳಿದರು.

ಸದಸ್ಯರಾದ ಪ್ರವಿಣ ಪ್ಯಾಟಿ, ಗೀತಾ ತಿಗಡಿ, ಸುನೀಲ ಕುಟ್ರೆ, ಗಜಾನನ ಸೇಠ, ಖಲೀಲ ಮುಲ್ಲಾ, ರಾಜು ಪೂಜಾರಿ, ಶಿವಾನಂದ ತಲ್ಲೂರ, ಮಹಾಂತೇಶ ನಾಶಿ, ಮಲ್ಲಿಕಾರ್ಜುನ ಕುಂಬಾರ, ಸಂದೀಪ ಪಾಟೀಲ, ಜಿ. ಸುರೇಖಾ, ವಿದ್ಯಾ ಕಾಪಸಿ, ಯೂತ್​ ಫಾರ್​ ಸೇವಾ ಸಂಸ್ಥೆಯ ಸಂಯೋಜಕ ಸಂತೋಷ ಖೋತ ಸೇರಿ ಸ್ವಯಂಸೇವಕರು ಜಿಲ್ಲೆಯ 240ಕ್ಕೂ ಹೆಚ್ಚು ಗಣಿತ ಶಿಕರು ಭಾಗವಹಿಸಿದ್ದರು. ಮಾನಸಿ ಪ್ರಾರ್ಥಿಸಿದರು. ನಿಖಿಲ ಸ್ವಾಗತಿಸಿದರು. ಮಹಾದೇವ ಎಂ.ಎಸ್​.ನಿರೂಪಿಸಿದರು. ಮಹಿಮಾ ಚಿನಗುಡಿ ವಂದಿಸಿದರು.