ಕೋಣಂದೂರು ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಡಾ.ಮುರಳೀಧರ ಕಿರಣಕೆರೆ, ಮಹಾಂತೇಶ್ ಗೌಡ, ಶಿವಕುಮಾರ್, ಕೆ.ಬಿ.ಪ್ರಕಾಶ್, ವಿದ್ಯಾರ್ಥಿ ಸಂಘದ ನಿಹಾಲ್ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಅಗತ್ಯ

ತೀರ್ಥಹಳ್ಳಿ: ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಮಾನಸಿಕ ಸದೃಢತೆ ರೂಢಿಸಿಕೊಳ್ಳಬೇಕು ಎಂದು ಲೇಖಕ ಡಾ.ಮುರಳೀಧರ ಕಿರಣಕೆರೆ ಹೇಳಿದರು.

ಕೋಣಂದೂರಿನ ಮಾಂಗಲ್ಯ ಮಂದಿರದಲ್ಲಿ ಶನಿವಾರ ನಡೆದ ಕೋಣಂದೂರು ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ, ಕಂಪ್ಯೂಟರ್ ಪ್ರಯೋಗಾಲಯ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.

ಅತಿಥಿಗಳಾಗಿದ್ದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಸ್ಪರ್ಧಾತ್ಮಕವಾಗಿರುವ ಜಗತ್ತಿನ ಈ ಕಾಲಘಟ್ಟದಲ್ಲಿ ಯಶಸ್ಸನ್ನು ಗಳಿಸಲು ಆತ್ಮವಿಶ್ವಾಸದೊಂದಿಗೆ ವಿದ್ಯಾರ್ಥಿಗಳು ನೈತಿಕ ಜ್ಞಾನ ಹೊಂದುವುದು ಕೂಡ ಅಗತ್ಯ ಎಂದರು.

ಪ್ರಾಚಾರ್ಯ ಮಹಾಂತೇಶ್ ಗೌಡ, ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಶಿವಕುಮಾರ್, ಉಪಪ್ರಾಚಾರ್ಯ ಕೆ.ಬಿ.ಪ್ರಕಾಶ್, ವಿದ್ಯಾರ್ಥಿ ಸಂಘದ ನಿಹಾಲ್ ಇದ್ದರು.