ಜಿಲ್ಲೆ

ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಯಲಿ

ಮಾಂಜರಿ: ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳೆಯಬೇಕು ಎಂದು ಮಾಜಿ ಯೋಧ ಬಾಳಾಸಾಹೇಬ ಧಯಾರಕರ ಕರೆ ನೀಡಿದರು.

ಗ್ರಾಮದ ಭಾರತ ಸರ್ಕಾರದ ನೆಹರು ಯುವ ಕೇಂದ್ರದಲ್ಲಿ ಅಂಬೇಡ್ಕರ್ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಸರ್ವೋದಯ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ತಾಲೂಕು ಘಟಕ ಚಿಕ್ಕೋಡಿ ಇವರ ಆಶ್ರಯದಲ್ಲಿ ಸೋಮವಾರ ಜರುಗಿದ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ನಾವೆಲ್ಲರೂ ನೆಮ್ಮದಿ, ಸುಖ, ಶಾಂತಿಯಿಂದ ಜೀವನ ನಡೆಸುತ್ತಿದ್ದೇವೆಂದರೆ ಅದಕ್ಕೆ ಸೈನಿಕರೇ ಕಾರಣ ಎಂದರು. ನಿವೃತ ಯೋಧ ಶ್ರೀಬಾಳಾಸಾಬ ಧಯಾರಕರ ಅವರನ್ನು ಸನ್ಮಾನಿಸಲಾಯಿತು.

ಸಮಾಜ ಸೇವಕರಾದ ಸಿದ್ದಾರ್ಥ ಗಾಯಾಗೋಳ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ, ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜಮುಖಿ ಕಾರ್ಯಗಳ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಧಯಾರಕರ, ಕೆ.ಎಸ್.ಸಾಳುಂಕೆ, ಎಂ.ಬಿ.ಕೋಳಿ, ಡಿ.ಬಿ.ಖಟಾವಿ, ಆರ್.ಎಸ್.ಶಿಂಗೆ ಇತರರಿದ್ದರು. ರಾಘವೇಂದ್ರ ಲಂಬುಗೋಳ ನಿರೂಪಿಸಿದರು.