ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಿ

ಕೊಡೇಕಲ್ : ಮಕ್ಕಳಲ್ಲಿ ಅಡಗಿರುವ ಬುದ್ಧಿಶಕ್ತಿಯನ್ನು ಇಂತಹ ಸ್ಪರ್ಧೆಯ ಮೂಲಕ ಅವರ ಕ್ರಿಯಾಶೀಲತೆ ಹೆಚ್ಚಿಸಬೇಕು ಎಂದು ಪ್ರಾಚಾರ್ಯ ಸುಮೋದ ಮೋಹನ ಹೇಳಿದರು.

ಇಲ್ಲಿನ ಆರ್‌ಟಿಜೆ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಮಾಡುವ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಮಕ್ಕಳು ಮಣ್ಣಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಮೂರ್ತಿ ಇಷ್ಟೊಂದು ಚನ್ನಾಗಿ ಮೂಡಿಬರಲು ಸಾಧ್ಯ ಎಂದರು.

ಈ ಹಿಂದೆ ಮಕ್ಕಳು ಮಳೆ ನೀರು, ಮಣ್ಣು ಸೇರಿದಂತೆ ನೈಸರ್ಗಿಕ ವಸ್ತುಗಳ ಜತೆ ಬೆರೆಯುವ ಮೂಲಕ ಹಲವು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಆದರೆ ಇಂದು ಪಠ್ಯ ವಿಷಯ ಹೊರತುಪಡಿಸಿ ಇನ್ನೂಳಿದ ಚಟುವಟಿಕೆಯಿಂದ ದೂರ ಉಳಿಯುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಿ ಉತ್ತಮ ಗಣೇಶ ಮೂರ್ತಿ ತಯಾರಿಸಿದ ಮಕ್ಕಳಿಗೆ ಮೂರು ಹಂತದಲ್ಲಿ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಯಶೋಪದ್ಮಾ, ಕವಿತಾ, ದೀಪಿಕಾ, ವಿಶ್ವಾರಾಧ್ಯ, ರಾಮ್‌ವಿಜಿನ, ಮನೋಜ, ಕಾವ್ಯ, ಶ್ರೀದೇವಿ, ಸುನೀಲಕುಮಾರ ಶೆಟ್ಟಿ, ತಿಗಳಪ್ಪ, ರಮೇಶ ಯಾದವ, ನಾಗೇಶ ಗೋಡ್ರಿ ಇದ್ದರು.