ಕಲಬುರಗಿ: ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಅದರ ಮಹತ್ವದ ಬಗ್ಗೆ ತಿಳುವಳಿಕೆ ನೀಡುವ ಅವಶ್ಯವಿದೆ. ಜ್ಞಾನ ಹೆಚ್ಚಳಕ್ಕೆ ಹಲವು ಅವಕಾಶಗಳಿದ್ದು, ಕೃಷಿಯ ಪೂರ್ಣ ಜ್ಞಾನ ಪಡೆದು ಯುವಕರು ಕೃಷಿಯತ್ತ ಆಸಕ್ತಿ ವಹಿಸಿ, ಸ್ವಾವಲಂಬಿ ಜೀವನ ಸಾಗಿಸಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಅನೀಲ ರಾಠೋಡ್ ಹೇಳಿದರು.
ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಿಂದ ಭಾಷಾ ನಿಕಾಯ ಹಾಗೂ ಸಮಾಜ ವಿe್ಞÁನಗಳ ವಿದ್ಯಾರ್ಥಿನಿಯರಿಗೆ ಕೋಟನೂರ (ಡಿ) ಗ್ರಾಮದ ಜಿ¯್ಲÁ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಒಂದು ದಿನದ ಕೃಷಿ ಪ್ರಾಯೋಗಿಕ ಶಿಬಿರದಲ್ಲಿ ಮಾತನಾಡಿದರು.
ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ಮಾತನಾಡಿ, ಮುಂಬರುವ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸಿ ಬಂದ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಬಹುದು. ಆ ವೇಳೆ ಪ್ರತಿಯೊಬ್ಬರೂ ಕೃಷಿ ಕಡೆ ಮುಖ ಮಾಡುವುದು ಅನಿವಾರ್ಯ ಆಗಬಹುದು ಎಂದರು.
ಡಾ.ಪ್ರೇಮಚAದ್ ಚವ್ಹಾಣ್, ಡಾ.ಸುಭಾಷ ದೊಡ್ಡಮನಿ, ಡಾ.ವಿಶ್ವನಾಥ ದೇವರಮನಿ, ಡಾ.ನಾಗರತ್ನ, ಶಿವಲಿಲಾ ಧೋತ್ರೆ, ಕವಿತಾ ಎಂ, ಪ್ರೊ.ಕವಿತಾ ಠಾಕೂರ, ಗೀತಾ ಪಾಟೀಲ್, ರೀಟಾ ಕುಲಕರ್ಣಿ ಇತರರಿದ್ದರು. ಡಾ.ಮಹೇಶ ಗಂವ್ಹಾರ ನಿರೂಪಣೆ ಮಾಡಿದರು. ಡಾ.ಪ್ರೇಮಚಂದ್ ಚವ್ಹಾಣ್ ವಂದಿಸಿದರು.