ಜಿಲ್ಲೆ

ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು

ಬಳ್ಳಾರಿ: ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎರಡು ತಿಂಗಳು ಬೇಸಿಗೆ ರಜೆ ಕಳೆದು ಶಾಲೆಗಳಿಗೆ ಆಗಮಿಸಿದ ಮಕ್ಕಳನ್ನು ಶಿಕ್ಷಕರು ಹೂ ನೀಡಿ ಶುಕ್ರವಾರ ಸ್ವಾಗತಿಸಿದರು. ಶಾಲೆಯ ಸಿಬ್ಬಂದಿ ಮಕ್ಕಳಿಗಾಗಿ ಮುಖ್ಯದ್ವಾರವನ್ನು ಬಲೂನ್ ಹಾಗೂ ಹಸಿರು ತೋರಣಗಳಿಂದ ಸಿಂಗರಿಸಿ ಕಾದು ಬರಮಾಡಿಕೊಂಡರು. ಎರಡು ತಿಂಗಳು ರಜೆ ಕಾಲ ಅನುಭವಿಸಿದ್ದ ಮಕ್ಕಳು ಮತ್ತೆ ಬೆನ್ನ ಮೇಲೆ ಪುಸ್ತಕದ ಚೀಲ ಹೊತ್ತು ಬಂದ ವಿದ್ಯಾರ್ಥಿನಿಯರು ಶಿಕ್ಷಕರಿಗೆ ನಮಸ್ಕರಿಸಿ ತರಗತಿಗಳಿಗಳತ್ತ ಹೆಜ್ಜೆ ಹಾಕಿದರು. ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ಭೋಧಿಸಿದರು. ಬೇಸಿಗೆ ರಜೆ ಕಳೆದು ಶಾಲಾ ಆರಂಭವಾಗಿದ್ದರಿಂದ ಮೊದಲ ದಿನ ಹಾಜರಾತಿ ಕಡಿಮೆಯಿದೆ. ಸೋಮವಾರ ದಿಂದ ತರಗತಿಗಳೆಲ್ಲವೂ ಭರ್ತಿಯಾಗಲಿವೆ ಎಂದು ಶಿಕ್ಷಕಿಯೊಬ್ಬರು ತಿಳಿಸಿದರು.