ಚಿತ್ತಾಪುರ: ಶಿಕ್ಷಕಿಯಾಗಿ ಸುದೀರ್ಘ 26 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಕುಂತಲಾ ಹಾವೇರಿ ವಿದ್ಯಾರ್ಥಿಗಳನ್ನು ಒಡಹುಟ್ಟಿದ ಮಕ್ಕಳಂತೆ ಕಂಡ ಮಾತೃಹೃದಯಿ ಬೋಧಕಿ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಶ್ಲಾಘಿಸಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಅಳ್ಳೋಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಕುಂತಲಾ ಹಾವೇರಿ ಅವರ ನಿವೃತ್ತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಹಾವೇರಿ ಟೀಚರ್ ಎಲ್ಲರೊಂದಿಗೆ ಬೆರೆಯುವ, ಸದಾ ಸಕಲರ ಒಳಿತು ಬಯಸಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಮತ್ತು ಇಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಮಾತನಾಡಿ, ಶಿಕ್ಷಕರು ಮಕ್ಕಳನ್ನು ಸಮಾಜದ ಶಕ್ತಿಯಾಗಿ ಪರಿವರ್ತನೆ ಮಾಡುತ್ತಾರೆ. ಶಿಕ್ಷಕಿ ಹಾವೇರಿ ಮತ್ತು ಅವರ ಪತಿ ಶರಣರ ತತ್ವ ಪಾಲಿಸಿದ ಬಹಳ ಸಾತ್ವಿಕರು. ಇಂಥ ದಂಪತಿ ಸಮಾಜಕ್ಕೆ ಮಾದರಿ ಎಂದು ಕೊಂಡಾಡಿದರು. ರಾಯಚೂರು ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಹಾಂತಗೌಡ ಪಾಟೀಲ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಮಾತನಾಡಿದರು.
ಬೆಂಗಳೂರು ಹೈಕೋರ್ಟ್ ನಿವೃತ್ತ ಡೆಪ್ಯೂಟಿ ರಿಜಿಸ್ಟಾçರ್ ವೀರಣ್ಣ ಚಿಕ್ಕನರಗುಂದ, ನಿವೃತ್ತ ಎಸ್‌ಒ ಬಸವರಾಜ ಬಳಗಾನೂರು, ಪ್ರಮುಖರಾದ ಡಾ.ಚಂದ್ರಶೇಖರ ಕಾಂತಾ, ಭೀಮಣ್ಣ ಸಾಲಿ, ಸ್ವರ್ಣಲತಾರೆಡ್ಡಿ ದುಗನೂರ, ಸೋಮಶೇಖರ ಹಾವೇರಿ, ವೀರೇಂದ್ರ ಕೊಲ್ಲೂರ, ರೇವಣಸಿದ್ದಪ್ಪ ರೋಣದ, ಮಲ್ಲಿಕಾರ್ಜುನ ಹಿರೆಗೋಳ, ವೀರಣ್ಣ, ಶರಣಪ್ಪ ಐಕೂರ, ಶಿವಾನಂದ ಆಲಹಳ್ಳಿ, ಶಿವಶರಣಪ್ಪ ಹಾವೇರಿ, ರೇವಣಸಿದ್ದಪ್ಪ ಹಾವೇರಿ, ಶ್ರೀಮಂತ ಪಡಶೆಟ್ಟಿ, ಅಶೋಕ ನಿಪ್ಪಾಣಿ, ಚಂದ್ರಶೇಖರ ಹಾವೇರಿ, ರಾಜಶೇಖರ ಹಾವೇರಿ. ಶಿವಶರಣಪ್ಪ ರೇಷ್ಮಿ, ರೇಣುಕಾ ಹಾವೇರಿ, ಶೋಭಾ ಹಾವೇರಿ, ಸಂತೋಷ ಹಾವೇರಿ, ನೀಲಕಂಠ ಹಾವೇರಿ, ಲಕ್ಷಿö್ಮÃಕಾಂತ ಹಾವೇರಿ ಇತರರಿದ್ದರು.
ವೀರಸಂಗಪ್ಪ ಸುಲೆಗಾಂವ ಸ್ವಾಗತಿಸಿದರು. ವೀರೇಶ ಮಕಾಪ ನಿರೂಪಣೆ ಮಾಡಿದರು. ವೀರಭದ್ರಪ್ಪ ಪಾಟೀಲ್ ಹುಮನಾಬಾದ್ ವಂದಿಸಿದರು. ನಿವೃತ್ತ ಶಿಕ್ಷಕಿ ಶಕುಂತಲಾ ಹಾವೇರಿ ಅವರನ್ನು ಶಿಕ್ಷಕರ ಸಂಘ ಸೇರಿ ವಿವಿಧ ಸಂಘಟನೆಗಳು, ಚಿತ್ತಾಪುರ ತಾಲೂಕಿನ ಬಳಗದವರು ಸನ್ಮಾನಿಸಿ ಗೌರವಿಸಿದರು.