ರಿಪ್ಪನ್‌ಪೇಟೆ ಅಮೃತ ಕರ್ನಾಟಕ ಪಬ್ಲಿಕ್ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಾನುಗೋಡು ಬಳಿ ಉರುಳಿರುವುದು. 
ಜಿಲ್ಲೆ

ವಿದ್ಯಾರ್ಥಿಗಳ ಕರೆದೊಯ್ಯುತ್ತಿದ್ದ ವಾಹನ ಅಪಘಾತ

ರಿಪ್ಪನ್‌ಪೇಟೆ: ಅಮೃತ ಕರ್ನಾಟಕ ಪಬ್ಲಿಕ್ ಶಾಲೆಗೆ ಮಕ್ಕಳನ್ನು ಕರೆತರುವ ವಾಹನ ಕಾನುಗೋಡು ಸಮೀಪ ಶನಿವಾರ ಅಪಘಾತಕ್ಕೀಡಾಗಿದೆ. ಎದುರಿನಿಂದ ಬರುತ್ತಿದ್ದ ಕಾರಿಗೆ ಸ್ಥಳಾವಕಾಶ ಮಾಡಿಕೊಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನ ರಸ್ತೆಯ ಪಕ್ಕಕ್ಕೆ ಜಾರಿ ಉರುಳಿದೆ. ಬಸ್‌ನಲ್ಲಿದ್ದ ಮಕ್ಕಳನ್ನು ರಕ್ಷಿಸಿ, ಬೇರೆ ವಾಹನದ ಮೂಲಕ ಶಾಲೆಗೆ ಕಳುಹಿಸಲಾಗಿದೆ. ತಮ್ಮಡಿಕೊಪ್ಪ, ಕಾನುಗೋಡು, ತಳಲೆ ಗ್ರಾಮಗಳ ಮಕ್ಕಳನ್ನು ಈ ವಾಹನ ಶಾಲೆಗೆ ಕರೆದೊಯ್ಯಲಾಗುತ್ತಿತ್ತು.