ಚಂದರಗಿ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಸಮಾರಂಭದಲ್ಲಿ ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ ಮಾತನಾಡಿದರು. ಫಕೀರೇಶ ಬಾದಾಮಿ, ಮಹಾಂತೇಶ ಗಲಗಲಿ, ಕಿರಣ ವಡಗೇರಿ ಇತರರು ಇದ್ದರು. 
ಜಿಲ್ಲೆ

ವಿದ್ಯಾರ್ಥಿ ಜೀವನದಲ್ಲೇ ಸಾಧನೆ ಮಾಡಿ

ಕಟಕೋಳ: ಸಮಸ್ಯೆಗಳು ನಮ್ಮ ಜೀವನ ರೂಪಿಸಲು ಎದುರಾಗುವ ಅವಕಾಶಗಳು. ಅವುಗಳನ್ನು ಮೆಟ್ಟಿನಿಂತು ಛಲದಿಂದ ಸಾಧನೆ ಮಾಡಬೇಕು. ಜ್ಞಾನಕ್ಕೆ ಸಮಾನವಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ವಿದ್ಯಾರ್ಥಿ ಜೀವನ ಅತ್ಯಂತ ಪವಿತ್ರವಾದದ್ದು, ಈ ಸಮಯದಲ್ಲಿ ಸ್ವಯಂ ಅರಿವು ಮೂಡಿಸಿಕೊಂಡು ಸಾಧನೆ ಮಾಡಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಸಮೀಪದ ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಸಮಾರೋಪದಲ್ಲಿ ಮಾತನಾಡಿ, ನಮ್ಮನ್ನು ಅಪಮಾನಿಸಿದವರಿಗೆ ನಮ್ಮ ಸಾಧನೆಯ ಮೂಲಕ ಉತ್ತರ ನೀಡಬೇಕು. ವಿದ್ಯಾರ್ಜನೆ ಸಮಯದಲ್ಲಿಯೇ ಮುಂದೆ ನೀವೇನಾಗಬೇಕು ಎಂದು ನಿರ್ಧರಿಸಿ, ನಮ್ಮ ಸಮಾಜಕ್ಕೆ ಉಪಯುಕ್ತವಾಗುವಂತಹ ಕೆಲಸ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು. ಪಾಲಕರು ಹಾಗೂ ಶಿಕ್ಷಕರಿಗೆ ಗೌರವ ನೀಡಬೇಕು.ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಈಗಿನಿಂದಲೇ ಅರಿವು ಬೆಳೆಸಿಕೊಳ್ಳಬೇಕು ಎಂದರು.

ಶಾಲೆಯ ಹಳೆಯ ವಿದ್ಯಾರ್ಥಿಯಾದ ಫಕೀರೇಶ ಬಾದಾಮಿ, ಮಹಾಂತೇಶ ಗಲಗಲಿ, ಕಿರಣ ವಡಗೇರಿ, ರಂಜೀತ ಜಗತಾಪ, ಪ್ರಾಚಾರ್ಯ ಎ.ಎನ್.ಮೋದಗಿ, ನಿರ್ದೇಶಕರಾದ ಎಂ.ಎಸ್.ಮುನವಳ್ಳಿ, ಎಸ್.ಆರ್.ನವರಕ್ಕಿ, ಬಿ.ಎಂ.ಬೆಳಗಲಿ, ಉದಯ ಸೋಮನಟ್ಟಿ ಮತ್ತಿತರರು ಇದ್ದರು.
ಶಿಕ್ಷಕರಾದ ಎಸ್.ಎ.ಹಿರೇಮಠ ನಿರೂಪಿಸಿದರು. ಎಸ್.ಎಸ್.ಉಮಚಗಿ ವಂದಿಸಿದರು.