ಮೂಡಿಗೆರೆ: ಪಾಲಕರು ಉತ್ತಮ ಶಾಲೆಯನ್ನು ಗುರುತಿಸಿ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸುತ್ತಾರೆ. ವಿದ್ಯಾರ್ಥಿಗಳು ಕೂಡ ಪಾಲಕರ ಇಚ್ಛೆಯಂತೆ ಗುರಿಯನ್ನಿಟ್ಟುಕೊಂಡು ಶೈಕ್ಷಣಿಕವಾಗಿ ಮುಂದುವರಿದರೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದು ಚಿಕ್ಕಮಗಳೂರು ಯುರೇಕಾ ಅಕಾಡೆಮಿ ಮುಖ್ಯಸ್ಥ ದೀಪಕ್ ದೊಡ್ಡಯ್ಯ ಹೇಳಿದರು.
ಬಿದರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಲಯನ್ಸ್ ಸಂಸ್ಥೆಯಿಂದ ಮಂಗಳವಾರ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಗುರಿಯಿಲ್ಲದೆ ಪಡೆದ ಶಿಕ್ಷಣ ಅಂಕಗಳನ್ನು ಮಾತ್ರ ನೀಡುತ್ತದೆ. ಗುರಿಯೊಂದಿಗೆ ಶಿಕ್ಷಣ ಪಡೆದರೆ ಬದುಕನ್ನು ಸಾಧನೆಯತ್ತ ಕರೆದೊಯ್ಯುತ್ತದೆ ಎಂದು ತಿಳಿಸಿದರು.
ಲಯನ್ಸ್ ಅಧ್ಯಕ್ಷ ಜಯಕುಮಾರ್ ಮಾತನಾಡಿ, ಬಹಳಷ್ಟು ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ ಸ್ಪಷ್ಟ ಗುರಿ ಇಲ್ಲದೆ ಬದುಕಿನಲ್ಲಿ ವಿಫಲರಾಗುತ್ತಿದ್ದಾರೆ ಎಂದು ತಿಳಿಸಿದರು.
ಲಯನ್ಸ್ ಕಾರ್ಯದರ್ಶಿ ದಿನೇಶ್, ಶಿವಕುಮಾರ್, ಪರೀಕ್ಷಿತ್ ಜಾವಳಿ, ಪ್ರಶಾಂತ್, ಲಿಖಿತ್, ಬಿ.ಟಿ.ವೆಂಕಟೇಶ್, ಮಲ್ಲಿಕಾರ್ಜುನ, ರೇಖಾ ಇತರರಿದ್ದರು.