ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸುವರ್ಣ ಕಲಾ ಹಾಗೂ ವಾಣಿಜ್ಯ ಕಾಲೇಜು ಹಾಗೂ ಅವಧಾನಿ ಕನ್ಸಲ್ಟನ್ಸಿ ಸವಿರ್ಸ್ ಆಶ್ರಯದಲ್ಲಿ ಸುವರ್ಣ ಕಾಲೇಜಿನಲ್ಲಿ ಆಯೋಜಿಸಿರುವ ಟ್ಯಾಲಿ ಪೆಂ, ಎಕ್ಸೆಲ್ ೌಂಡೇಶನ್ ಕೋರ್ಸ್ಗಳ ತರಬೇತಿಗೆ ಮಂಗಳವಾರ ಚಾಲನೆ ನೀಡಲಾಯಿತು.
ಸುವರ್ಣ ಎಜುಕೇಷನ್ ಟ್ರಸ್ಟ್ ಅಧ್ಯ ವಿಶ್ವನಾಥ ಅಮರಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಆಯೋಜಿಸಿರುವ ಈ ಕೊರ್ಸ್ಗಳ ತರಬೇತಿ ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾಥಿರ್ಗಳಿಗೆ ಸಹಾಯಕವಾಗಿವೆ. ವಾಣಿಜ್ಯ ವಿಭಾಗದ ವಿದ್ಯಾಥಿರ್ಗಳು ಟ್ಯಾಲಿ, ಎಕ್ಸೆಲ್ನಂತಹ ಕೋರ್ಸ್ಗಳನ್ನು ಕಲಿಯದಿದ್ದರೆ ಉದ್ಯೋಗ ಲಭಿಸುವುದು ಕಷ್ಟಕರ. ಇಂದಿನ ದಿನಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶ ಲಭ್ಯವಿದ್ದು, ಇದರ ಸದುಪಯೋಗಕ್ಕೆ ಕಂಪ್ಯೂಟರ್ ಜ್ಞಾನ ಮುಖ್ಯ. ಇದೇ ಕಾರಣಕ್ಕೆ ವಿದ್ಯಾಥಿರ್ಗಳ ಸರ್ವಾಂಗೀಣ ಅಭಿವೃದ್ಧಿ ನಮ್ಮ ಗುರಿಯಾಗಿದೆ ಎಂದರು.
ಅವಧಾನಿ ಕನ್ಸಲ್ಟನ್ಸಿ ಸವಿರ್ಸ್ ನಿರ್ದೇಶಕ ಗುರುರಾಜ ಅವಧಾನಿ ಮಾತನಾಡಿ, ಕೋರ್ಸ್ಗಳ ಪ್ರಾಮುಖ್ಯತೆ ತಿಳಿಸಿದ ಅವರು, ಈ ಕೊರ್ಸ್ಗಳನ್ನು ವಿದ್ಯಾಥಿರ್ಗಳು ಕಲಿಯುವುದರಿಂದ ಉತ್ತಮ ಉದ್ಯೋಗ ಶ್ರೀದಲ್ಲಿ ಸಿಗಲಿದೆ. ಕಂಪ್ಯೂಟರ್ ಕಲಿಕೆಯಿಂದ ದೊರಕುವ ಅಸಂಖ್ಯಾತ ಉದ್ಯೋಗವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಂಸ್ಥೆ ಕಾರ್ಯದಶಿರ್ ಸವಿತಾ ಅಮರಶೆಟ್ಟಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಪ್ರಿಯಾ ಅಂಗಡಿ, ಉಪನ್ಯಾಸಕರು, ವಿದ್ಯಾಥಿರ್ಗಳು, ಇತರರು ಇದ್ದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್. ಗೌಡರ ಸ್ವಾಗತಿಸಿದರು. ಪ್ರೊ. ನಿರ್ಮಲಾ ಗುರವ ನಿರೂಪಿಸಿದರು. ಪ್ರೊ. ಮಧು ಹಡಪದ ವಂದಿಸಿದರು.