ಗಾಳಿಗಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರತಿಷ್ಠಾಪಿಸಿದ್ದ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆ ನಡೆಸಲಾಯಿತು. 
ಜಿಲ್ಲೆ

ವಿದ್ಯಾಗಣಪತಿ ಮಹೋತ್ಸವ ಸಂಪನ್ನ

ಆಲ್ದೂರು: ಪಟ್ಟಣದ ಗಾಳಿಗಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರತಿಷ್ಠಾಪಿಸಿದ್ದ 36ನೇ ವರ್ಷದ ವಿದ್ಯಾಗಣಪತಿಯನ್ನು ಸೋಮವಾರ ವಿಸರ್ಜಿಸಲಾಯಿತು.

ಅಲಂಕೃತ ಸಾರೋಟಿನಲ್ಲಿ ವಿದ್ಯಾಗಣಪತಿಯನ್ನು ಕೂರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಗಾಳಿಗಂಡಿ ಮೂಲಕ ಸಾಗಿ ವಿವಿಧ ಮುಖ್ಯರಸ್ತೆಗಳಲ್ಲಿ ಸಾಗಿ ಬೀರಂಜಿ ಹಳ್ಳದಲ್ಲಿ ವಿಸರ್ಜಿಸಲಾಯಿತು.

ಡ್ರಮ್‌ಸೆಟ್ ನಾದಕ್ಕೆ ಮಕ್ಕಳು, ಮಹಿಳೆಯರು ಕುಣಿದು ಸಂಭ್ರಮಿಸಿದರು. ಗಾಳಿಗಂಡಿ ಗ್ರಾಮವನ್ನು ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ ಸುಂದರ ರಾಮನಮೂರ್ತಿ ಸಾರ್ವಜನಿಕರ ಗಮನ ಸೆಳೆಯಿತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಕೆ.ಡಿ.ಸುರೇಶ್, ವಸಂತ್, ವೈ.ಲಾ.ರವಿ, ಸೂರಜ್, ರಾಜು, ರಮೇಶ್ ಆಚಾರ್ಯ ಮತ್ತಿತರರಿದ್ದರು.