ಕಾಳಗಿ : ಅಪಾರ ಸಂಪತ್ತು ಹೊಂದಿ ಚಿನ್ನದ ಗುಬ್ಬಿ ಎಂದು ಹೆಸರು ಪಡೆದಿದ್ದ ಭಾರತವನ್ನು ಇಂಗ್ಲಿಷ್ರೂ ಸೇರಿ, ಅನೇಕ ವಿದೇಶಿಗರು ಸಾಕಷ್ಟು ಲೂಟಿ ಮಾಡಿದ್ದು ನಿಜವಾದರೂ ಅವರೆಲ್ಲರನ್ನೂ ಮೀರಿಸುವಷ್ಟು ಲೂಟಿಯನ್ನು 60ವರ್ಷ ದೇಶವಾಳಿದ ಕಾಂಗ್ರೆಸ್ ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಆರೋಪಿಸಿದರು.
ಇಲ್ಲಿನ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗದಲ್ಲಿ ದೇಶದ ರಕ್ಷಣಾ ವಿಷಯದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರದ ರಕ್ಷಣಾ ಕ್ಷೇತ್ರವನ್ನೂ ಬಿಡದೆ ಜೀಪ್ ಹಗರಣ, ಜಲಾಂತಗರ್ಾಮಿ ಹಗರಣ, ಭೋಪಸರ್್ ಹಗರಣ, ಹೆಲಿಕಾಪ್ಟರ್ ಹಗರಣಗಳನ್ನು ಮಾಡಿ ದೇಶವನ್ನು ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿದರೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ರೋಸಿ ಹೋದ ದೇಶದ ಜನತೆ 2014ರಲ್ಲಿ ಬಿಜೆಪಿಯ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೆ ತಂದ ಬಳಿಕ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಿ ರಕ್ಷಣಾ ಕ್ಷೇತ್ರವನ್ನೂ ಒಳಗೊಂಡು ಎಲ್ಲ ವಲಯಗಳಲ್ಲೂ ಭಾರತ ಆತ್ಮ ನಿರ್ಭರವಾಗುವಂಥ ಅನೇಕ ಯೋಜನೆಗಳನ್ನು ಜಾರಿಗೆ ತರುತಿದ್ದಾರೆಂದು ಹೇಳಿದರು.
ಶಾಸಕರಾದ ಡಾ.ಅವಿನಾಶ ಜಾಧವ್, ಶಶೀಲ್ ನಮೋಶಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ರಾಘವೇಂದ್ರ ಕುಲಕಣರ್ಿ, ಆನಂದ ಚವ್ಹಾಣ, ನಾಮದೇವ ರಾಠೋಡ್, ಮಾತನಾಡಿದರು. ಕಾಳಗಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಮೇಶ ಕಿಟ್ಟದ, ರಾಜುಗೌಡ ರಟಕಲ್, ಶ್ರೀಮಂತ ಕಟ್ಟಿಮನಿ, ಅಜಿತ ಪಾಟೀಲ್, ಸಂತೋಷ ಪಾಟೀಲ್ ಮಂಗಲಗಿ, ಸತೀಷರೆಡ್ಡಿ, ಶಿವಶರಣಪ್ಪ ಗುತ್ತೇದಾರ, ವೈಜನಾಥ ರಟಕಲ್, ಪ್ರಶಾಂತ ಕದಂ, ರಾಜಕುಮಾರ ರಾಜಾಪುರ, ಈಸುಗೌಡ ಮಳಗಿ, ಶಿವಕುಮಾರ ಪೋಚಾಲಿ, ಮಶಾಖ್ ಪಟೇಲ್ ಇದ್ದರು.
ಭೀಮಶೆಟ್ಟಿ ಮುರಡಾ ಸ್ವಾಗತಿಸಿದರು. ಸಂಜಯ್ ಮಿಸ್ಕಿನ್ ಗೀತೆ ಹಾಡಿದರು. ಶೇಖರ ಪಾಟೀಲ್ ನಿರೂಪಣೆ ಮಾಡಿದರು.