ಶಹಾಬಾದ್‌ನಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ಆಯೋಜಿಸಿದ್ದ ವಿಜಯದಶಮಿ ಉತ್ಸವವನ್ನು ಕಿರಣಕುಮಾರ ಉದ್ಘಾಟಿಸಿದರು. ಬಸವರಾಜ ಸಾತಿಹಾಳ, ರಾಮು ಕುಸಾಳೆ, ಉದಯಕುಮಾರ ನಂದಗೌಳಿ ಇತರರಿದ್ದರು. 
ಜಿಲ್ಲೆ

ವಿದೇಶಿ ಸಂಸ್ಕೃತಿ ಬಿಡಿ, ಶ್ರೇಷ್ಠ ಪರಂಪರೆ ಅನುಸರಿಸಿ

ಶಹಾಬಾದ್: ದೇಶದಲ್ಲಿ ಪಾಶ್ಚಾತ್ಯ ಶೈಲಿಯ ಆಚರಣೆ ಮೂಲಕ ಸಾಂಸ್ಕೃತಿಕ ಮಾರ್ಕ್ಸ್ವಾದ ನಡೆಯುತ್ತಿದ್ದು, ಈ ಮೂಲಕ ಸನಾತನ ಸಂಸ್ಕೃತಿ ಹಾಳು ಮಾಡಲಾಗುತ್ತಿದೆ ಎಂದು ಎಂದು ಯುವ ವಾಗ್ಮಿ ಕಿರಣಕುಮಾರ ಹೇಳಿದರು.

ಭಾರತ ಚೌಕ್‌ನಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ಶನಿವಾರ ಆಯೋಜಿಸಿದ್ದ 42ನೇ ವರ್ಷದ ವಿಜಯದಶಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಹಣೆಗೆ ತಿಲಕವಿಡುತ್ತಿಲ್ಲ, ಯುವತಿಯರು ಕುಂಕುಮವಿಲ್ಲದೆ, ಕೈಗೆ ಬಳೆ ಹಾಕದೆ ತಿರುಗಾಡುತ್ತಿದ್ದಾರೆ. ಸಂಪೂರ್ಣ ವಿದೇಶಿ ಆಚರಣೆಗೆ ಮಾರು ಹೋಗುವ ಮೂಲಕ ನಮ್ಮ ಸಂಸ್ಕಾರವನ್ನು ಮರೆಯುತ್ತಿದ್ದಾರೆ. ಇನ್ನೊಂದೆಡೆ ಜಿಹಾದಿಗಳು ಧರ್ಮವನ್ನು ಕಾಡುತ್ತಿದೆ. ಇದನ್ನು ನಾವು ಕಾನೂನು, ಅಕ್ಷರದ ಕ್ರಾಂತಿ ಮೂಲಕ ಹೋರಾಡಬೇಕಾಗಿದೆ ಎಂದು ಕರೆ ನೀಡಿದರು.

ಪ್ರಮುಖರಾದ ಬಸವರಾಜ ಸಾತಿಹಾಳ, ರಾಮು ಕುಸಾಳೆ, ಉದಯಕುಮಾರ ನಂದಗೌಳಿ, ದೇವೆಂದ್ರ ಪೊಲೀಸ್ ಪಾಟೀಲ್, ಸಚಿನ್ ಹಂಚಾಟೆ, ಸುಖದೇವ ಸಾಳೊಂಕೆ, ಹರೀಶ ಹೀಬಾರೆ, ಅಭಿಲಾಷ, ಅರುಣ ಸಾತಿಹಾಳ, ಲೋಹಿತ, ಭೀಮರಾವ ಸಾಳೊಂಕೆ, ಭಾನುದಾಸ ತುರೆ, ಕನಕಪ್ಪ ದಂಡಗುಲಕರ್, ಚಂದ್ರಕಾAತ ಗೊಬ್ಬುರಕರ, ಸುಭಾಷ ಜಾಪೂರ, ಅನೀಲ ಹೀಬಾರೆ, ನಿಂಗಣ್ಣ ಹುಳಗೋಳ, ಬಸವರಾಜ ಬಿರಾದಾರ, ಅಶೋಕ ವಾಗಣಗೇರಿ, ಸಂಜಯ ವಿಟಕರ್ ಇತರರಿದ್ದರು.

ಭಾರತ ಚೌಕ್‌ನ ಭಾರತಾಂಬೆ, ಛತ್ರಪತಿ ಶಿವಾಜಿ ಮಹಾರಾಜರ ಭಾಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. 1982ರಲ್ಲಿ ವಿಜಯದಶಮಿ ಉತ್ಸವ ಪ್ರಾರಂಭಿಸಿದ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಮುಖಂಡರಾದ ದಿ.ಗಣಪತಿ ಭಟ್ಟ ಸೋಮಯಾಜಿ, ದಿ.ಬಲರಾಮ ಕೋಬಾಳಕರ ಅವರ ಪೋಟೊಗೆ ಮಾಲರ್ಪಣೆ ಮಾಡಲಾಯಿತು. ಶ್ರೀಜಗದಂಬಾ ದೇವಸ್ಥಾನದಿಂದ ಶರಣಬಸವೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿಯೊಂದಿಗೆ ತೆರಳಿ ಬನ್ನಿ ಮುಡಿಯಲಾಯಿತು. ಶರಣು ವಸ್ತçದ ಪ್ರಾಸ್ತಾವಿಕ ಮಾತನಾಡಿದರು. ಶಿವುಕುಮಾರ ಕೊಳ್ಳಿ ನಿರೂಪಣೆ ಮಾಡಿದರು. ಮಹೇಶ ವಂದಿಸಿದರು.