ಜಿಲ್ಲೆ

ವಿದೇಶ ಪ್ರವಾಸ ಮುಗಿಸಿ ಬಂದ ಮಲ್ಲಿಕಾರ್ಜುನ ಶ್ರೀ

Shivamogga

ಆನಂದಪುರ: ಸಮೀಪದ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು ಮಲೇಷಿಯಾ ಮತ್ತು ಸಿಂಗಾಪುರ ವಿದೇಶ ಯಾತ್ರೆ ಮುಗಿಸಿ ಬಂದ ಹಿನ್ನೆಲೆಯಲ್ಲಿ ಭಾನುವಾರ ಭಕ್ತರು ಸ್ವಾಗತ ಕೋರಿದರು. ಆಚಾಪುರದ ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ರಾಜು ಮತ್ತು ಆಲುವಳ್ಳಿ ಶೇಖರಪ್ಪ ಶ್ರೀಗಳಿಗೆ ಫಲ ತಾಂಬೂಲ ನೀಡಿ ಸ್ವಾಗತಿಸಿದರು. ವಿದೇಶ ಪ್ರವಾಸದ ಬಗ್ಗೆ ಮಾತನಾಡಿದ ಶ್ರೀಗಳು, ಆರು ದಿನ ವಿದೇಶದಲ್ಲಿದ್ದು ಮಲೇಷ್ಯಾದಲ್ಲಿ ಶಿವಾನುಭವ ಗೋಷ್ಠಿ, ವಚನ ವ್ಯಾಖ್ಯಾನ ನಡೆಸಿಕೊಡಲಾಯಿತು. ಐವರು ಭಕ್ತರ ಮನೆ ಭೇಟಿ ಕಾರ್ಯಕ್ರಮ ನಡೆಸಲಾಯಿತು. ಶಿವಶರಣರ ಕಾಲದ ಕಾಯಕ ತತ್ವ ಮತ್ತು ಸಾಮಾಜಿಕ ಸಾಮರಸ್ಯದ ಅಂಶಗಳ ಬಗ್ಗೆ ಪ್ರಚಾರ ಪಡಿಸಸಲಾಯಿತು ಎಂದರು.