ಚಿಕ್ಕಮಗಳೂರಿನ ಸಿಪಿಐ ಕಚೇರಿಯಲ್ಲಿ ಶನಿವಾರ ಸಿಪಿಐ ಮಾಜಿ ಸಂಸದ ಸುರವರಂ ಸುಧಾಕರ್‌ರೆಡ್ಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜಿ.ರಘು, ಎಸ್.ವಿಜಯಕುಮಾರ್, ಸೋಮೇಗೌಡ, ಸಿ.ವಸಂತ್ ಕುಮಾರ್, ಜರ್ನಿ ಲೋಬೋ ಮತ್ತಿತರರಿದ್ದರು. 
ಜಿಲ್ಲೆ

ವಿದರ್ಭ ಪ್ಯಾಕೇಜ್ ಘೋಷಣೆಗೆ ಸುಧಾಕರ್‌ರೆಡ್ಡಿ ಹೋರಾಟ

ಚಿಕ್ಕಮಗಳೂರು: ಕಾಫಿ ಬೆಳೆಗಾರರು ಮತ್ತು ರೈತರ ಸಂಕಷ್ಟ ಜೀವನೋಪಾಯವನ್ನು ಹತೋಟಿಗೆ ತರಲು ಸುಧಾಕರ್‌ರೆಡ್ಡಿ ಕೃಷಿ ಭೂಮಿಯನ್ನು ಸಮಗ್ರವಾಗಿ ಪರಿಶೀಲಿಸಿ, ವರದಿ ಸಲ್ಲಿಸಿದ ಪರಿಣಾಮದಿಂದಲೇ ಕೇಂದ್ರದಿAದ ವಿದರ್ಭ ಪ್ಯಾಕೇಜ್ ಘೋಷಣೆಯಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ತಿಳಿಸಿದರು.

ನಗರದ ಅಂಬೇಡ್ಕರ್ ರಸ್ತೆ ಸಮೀಪದ ಸಿಪಿಐ ಕಚೇರಿಯಲ್ಲಿ ಶನಿವಾರ ಸಿಪಿಐ ಮಾಜಿ ಸಂಸದ ಸುರವರಂ ಸುಧಾಕರ್‌ರೆಡ್ಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಆಂಧ್ರಪ್ರದೇಶದಲ್ಲಿ ಜನಿಸಿದ ಸುಧಾಕರ್‌ರೆಡ್ಡಿ ಅವರು ಸಂಸದೀಯ ಕ್ಷೇತ್ರದಿಂದ ೧೨ ಮತ್ತು ೧೪ ನೇ ಲೋಕಸಭೆಗೆ ಎರಡು ಬಾರಿ ಆಯ್ಕೆಯಾದರು. ಹಲವಾರು ಸಾಮೂಹಿಕ ಹೋರಾಟಗಳ ನಾಯಕ ಮತ್ತು ಪಕ್ಷದ ಒಳಗೆ ಮತ್ತು ಹೊರಗೆ ವ್ಯಾಪಕವಾಗಿ ಮೆಚ್ಚುಗೆ ಪಡೆದವರು ಎಂದು ತಿಳಿಸಿದರು.

ರೆಡ್ಡಿ ಅವರು ೧೯೬೦ರಲ್ಲಿ ಸಿಪಿಐನ ವಿದ್ಯಾರ್ಥಿ ವಿಭಾಗವಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್‌ಗೆ ಸೇರುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ೧೯೭೦ರಲ್ಲಿ ಅಖಿಲ ಭಾರತ ಅಧ್ಯಕ್ಷ, ೧೯೭೧ರಲ್ಲಿ ಅವರು ರಾಷ್ಟಿçÃಯ ಮಂಡಳಿಗೆ ಆಯ್ಕೆಯಾದರು. ಎರಡು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತರೂ ದರತಿಗೆಡದ ಅಪರೂಪದ ವ್ಯಕ್ತಿತ್ವ ಅವರದ್ದು ಎಂದರು.

ಸಿಪಿಐ ಮುಖಂಡ ವಿಜಯ್‌ಕುಮಾರ್ ಮಾತನಾಡಿ, ಅರಣ್ಯ ವಾಸಿಗಳ ಪರದಾಟವನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದ ಸುಧಾಕರ್‌ರೆಡ್ಡಿ ಅವರು ಹಲವಾರು ಹೋರಾಟ ರೂಪಿಸಿ ಹಕ್ಕುಪತ್ರ ಕಾಯ್ದೆ ಜಾರಿಗೊಳಿಸಿದ ಕೀರ್ತಿ ಪಡೆದರು. ಅಲ್ಲದೇ ಕಮ್ಯೂನಿಸ್ಟ್ ಪಕ್ಷಕ್ಕೂ ಅಪಾರವಾದ ಬಳವಳಿಯನ್ನು ನೀಡಿ ಪಕ್ಷ ಸದೃಢಗೊಳಿಸಲು ಮುಂದಾಗಿದ್ದರು ಎಂದು ಹೇಳಿದರು.

ರೈತರು, ಕಾಫಿ ಬೆಳೆಗಾರರು, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಪಕ್ಷಾತೀತವಾಗಿ ಪರಿಗಣಿಸಿ ಅಂದಿನ ಕಾಲಘಟ್ಟದಲ್ಲೇ ಸರ್ಕಾರದ ಮಟ್ಟದಲ್ಲಿ ಪರಿಹಾರ ಒದಗಿಸಲು ಮಹತ್ತರ ಯೋಜನೆಗೆ ಮುನ್ನುಡಿ ಬರೆದದ್ದರು. ಈ ವ್ಯಕ್ತಿತ್ವದ ಜೀವನವನ್ನು ಪ್ರತಿಯೊಬ್ಬರು ಅನುಸರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಸೋಮೇಗೌಡ, ಸದಸ್ಯರಾದ ಸಿ.ವಸಂತ್‌ಕುಮಾರ್, ಜರ್ನಿಲೋಬೋ, ಜಯಕುಮಾರ್, ತಾಲೂಕು ಸಹ ರ್ಕಾದರ್ಶಿ ರಘು, ಮುಖಂಡ ಕಳಸಪ್ಪ ಮತ್ತಿತರರಿದ್ದರು.