ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಠ್ಠಲನ ನಾಮಸ್ಮರಣೆಯಿಂದ ಹೃದಯಾಘಾತ ದೂರವಾಗುವುದು ಎಂದು ಆರೋಗ್ಯ ವಿಜ್ಞಾನಿಗಳಿಂದ ಸಮರ್ಥಿಸಲ್ಪಟ್ಟಿದೆ ಎಂದು ಪಂಢರಪುರದ ಶ್ರೀ ಸಂತಶಿರೊಮಣಿ ನಾಮದೇವ ಮಹಾರಾಜರ ವಂಶಸ್ಥ ನಾಮದಾಸ್ ತುಳಸಿದಾಸ್ ಜ್ಞಾನೇಶ್ವರ ಮಹಾರಾಜರು ಹೇಳಿದರು.
ನಗರದ ಬಾಳಿಕಾಯಿ ಓಣಿಯ ಶ್ರೀ ನಾಮದೇವ ಹರಿಮಂದಿರದ 10ನೇ ವಾರ್ಷಿಕೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಕೀರ್ತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಮೋಬೈಲ್ನಿಂದ ದೂರವಿದ್ದರೆ ಉತ್ತಮ. ಚಿಕ್ಕವರಿದ್ದಾಗಲೇ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆದೊಯ್ದು ಉತ್ತಮ ಸಂಸ್ಕಾರ ನೀಡಬೇಕು. ಬರೀ ಶಿಕ್ಷಣಕ್ಕೆ ಮಹತ್ವ ನೀಡದೆ ಮಾನವೀಯ ಮೌಲ್ಯಗಳನ್ನು ಸಹ ತಿಳಿಸಿಕೊಡಬೇಕು ಎಂದರು.
ಅಖಿಲ ಕರ್ನಾಟಕ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ನಾರಾಯಣ ಕೋಪರ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮ ಉತ್ತಮವಾಗಿ ಸಾಗುವಲ್ಲಿ ಯುವಕ ಮಂಡಳದ ಕಾರ್ಯ ಶ್ಲಾಘನೀಯ. ಎಲ್ಲರೂ ಸೇರಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಮಧುಸೂದನ ಪಿಸೆ, ಮುರಳೀಧರ ಹಾಸಲ್ಕರ, ಸೋಮನಾಥ ಗಂಜಿಗಟ್ಟಿ, ಗುಂಡು ಭಿಂಗೆ, ಪ್ರಭಾಕರ ಭೂಂಗಾಳೆ, ವಿನಾಯಕ ಪಿಸೆ, ಜಗನ್ನಾಥರಾವ ಕಠಾರೆ, ಅಶೋಕ ಭೋಂಗಾಳೆ, ಇತರರು ಇದ್ದರು. ರಶ್ಮಿ ಪಿಸೆ ನಿರೂಪಿಸಿದರು. ಸುಮಾ ಹಾಸಲ್ಕರ ವಂದಿಸಿದರು.