ಜಿಲ್ಲೆ

ವಿಠಲ-ರುಕ್ಮಿಣಿ ದಿಂಡಿ ಉತ್ಸವ ಅದ್ದೂರಿ

ಕೂಡ್ಲಿಗಿ: ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ವಿಠಲ-ರುಕ್ಮಿಣಿ ದಿಂಡಿ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ವಿಠಲ-ರುಕ್ಮಿಣಿ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಅಲಂಕಾರ, ಪೂಜೆ, ಕಾಕಡಾರತಿ ನೆರವೇರಿಸಲಾಯಿತು. ಪ್ರವಚನ, ಕೀರ್ತನೆ, ಭಜನೆ, ಜ್ಞಾನೇಶ್ವರಿ ಪಾರಾಯಣ ಮಾಡಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ವಿಠಲ-ರುಕ್ಮಿಣಿ ಹಾಗೂ ಸಂತ ಜ್ಞಾನೇಶ್ವರಿ ಕೃತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸಂತ ಸಮೂಹ ಬಾಳ, ಗೋಪಾಳ, ತಾಳ, ಮೃದಂಗ ಬಾರಿಸುತ್ತ ಅಭಂಗಗಳನ್ನು ಹಾಡಿ ಕುಣಿದು ಕುಪ್ಪಳಿಸಿದರು. ದಾರಿಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದಲ್ಲಿ ಕಾಲಾ ಕೀರ್ತನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ನಂತರ ವಾಸವಿ ಕಲ್ಯಾಣ ಮಂಟಪದಲ್ಲಿ ಅನ್ನಸಂತರ್ಪಣೆ ನಡೆಯಿತು.

ಖಜಾಂಜಿ ಜೆ.ಕಿಶೋರ್, ಸದಸ್ಯರಾದ ಜಿ.ವಿಜಯ್, ಆರ್.ರಾಘವೇಂದ್ರ ರಾವ್, ಪಿ.ಆರ್.ವೆಂಕಟೇಶ, ವಿಠೋಬರಾವ್, ಶೋಭಾ, ಪಿ.ಶೀಲಾಬಾಯಿ ಇತರರಿದ್ದರು.