ಶೃಂಗೇರಿ ಬಿಆರ್‌ವಿ ಮಾಡೆಲ್ ಸ್ಕೂಲ್ ಆಯೋಜಿಸಿದ್ದ ಜ್ಞಾನ ವಿಜ್ಞಾನ ಸೃಜನಶೀಲ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವರಲಕ್ಷ್ಮೀ ಅವರನ್ನು ಗೌರವಿಸಲಾಯಿತು. ಅರುಣ್. ಎಚ್.ಕೆ.ಮಹೇಶ್ವರಪ್ಪ, ಬಿ.ಶಿವಶಂಕರ್ ಇತರರಿದ್ದರು. 
ಜಿಲ್ಲೆ

ವಿಜ್ಞಾನದಿಂದ ಸೃಜನಶೀಲ ಬದಲಾವಣೆ

ಶೃಂಗೇರಿ: ಗಾಢವಾದ ಪರಿಶೋಧನಾ ಶಕ್ತಿ ಮತ್ತು ಸತ್ಯದ ಕುರಿತು ಸೂಕ್ಷ್ಮದ ಅರಿವಿನ ಯುಕ್ತಿ ವಿಜ್ಞಾನದ ವೈಶಿಷ್ಟ್ಯ. ಆಧುನಿಕ ಪ್ರಪಂಚದಲ್ಲಿ ಜ್ಞಾನದ ಪ್ರಖರತೆಯನ್ನು ವಿಜ್ಞಾನ ಪಸರಿಸಲು ಪೂರಕವಾಗಿದೆ ಎಂದು ಸಾಹಿತಿ ಬಿ.ಶಿವಶಂಕರ್ ತಿಳಿಸಿದರು.

ಬಿಆರ್‌ವಿ ಮಾಡೆಲ್ ಸ್ಕೂಲ್ ಬುಧವಾರ ಆಯೋಜಿಸಿದ್ದ ಜ್ಞಾನ ವಿಜ್ಞಾನ ಸೃಜನಶೀಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಜನಜೀವನ ಬದಲಾಯಿಸಿದೆ. ವಿಜ್ಞಾನ ಜ್ಞಾನವನ್ನು ಅನುಸರಿಸುವ ಹಾಗೂ ಹಲವು ಸಂದರ್ಭದಲ್ಲಿ ಜಗತ್ತಿನ ವಿದ್ಯಮಾನಗಳನ್ನು ಯತ್ನಿಸುವ ಶಾಖೆ. ವಿದ್ಯಾರ್ಥಿಗಳು ಪ್ರಯೋಗಾತ್ಮಕ ಭಾವನೆಯಿಂದ ವಿಜ್ಞಾನದ ಅರಿವಿನ ಜತೆಗೆ ಸೃಜನಶೀಲ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.

ಬಿಇಒ ಜಿ.ವರಲಕ್ಷ್ಮೀ ಮಾತನಾಡಿ, ನೈಸರ್ಗಿಕ ಘಟನೆಗಳನ್ನು ಅವಲೋಕಿಸಿ ಅಧ್ಯಯನ ಮಾಡುವ ಪ್ರಕ್ರಿಯೆ ವಿಜ್ಞಾನ. ಜಗತ್ತಿನ ವಿಸ್ಮಯಗಳ ಹಿಂದೆ ಇರುವ ಸತ್ಯದ ಅರಿವು ಪಡೆಯಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ವಿದ್ಯಾರ್ಥಿಗಳು ರಚಿಸಿದ ವಿಜ್ಞಾನದ ಮಾಡೆಲ್‌ಗಳು ನೋಡುಗರ ಗಮನ ಸೆಳೆದವು. ಶಿವಮೊಗ್ಗ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಮುಖ್ಯಸ್ಥರಾದ ಶೋಭಾ ವೆಂಕಟರಮಣ, ಎಸ್‌ಡಿಎಂಸಿ ಸದಸ್ಯರಾದ ಚಂದ್ರಕಾಂತ್ ದೇಸಾಯಿ, ಸುಬ್ರಹ್ಮಣ್ಯ ಅಂಬಲಮನೆ, ರಾಮೇಶ್ವರ ರಾವ್ ಇದ್ದರು.