ಜಿಲ್ಲೆ

ವಿಜ್ಞಾನ ತಂತ್ರಜ್ಞಾನದಲ್ಲಿ ಕನ್ನಡ ಬಳಸಿ

ಕಲಬುರಗಿ: ಕನ್ನಡ ಬಳಕೆ ದಿನೇ ದಿನೆ ಕ್ಷೀಣಿಸುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನ್ನಡ ಭಾಷಿಗರ ಸಂಖ್ಯೆ ಶೇ.೭೦ಕ್ಕೆ ಇಳಿದಿದೆ. ಇದನ್ನು ನಿಯಂತ್ರಿಸಲು ಕಂಪ್ಯೂಟರ್ ಸೇರಿ ಎಲ್ಲ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಕೆ ಆಗಬೇಕು ಎಂದು ಗುವಿವಿ ರಾಜ್ಯಶಾಸ್ತç ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಕಾಂತ ಯಾತನೂರ ಹೇಳಿದರು.

ಹೂವಿನ ಹಡಗಲಿಯ ರಾಜ್ಯ ಬರಹಗಾರರ ಸಂಘ, ರೋಟರಿ ಇನ್ನರ್‌ವಿಲ್ ಕ್ಲಬ್ ಆಫ್ ಗುಲ್ಬರ್ಗ ಮಿಡ್‌ಟೌನ್ ಸಹಯೋಗದಲ್ಲಿ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯೋತ್ಸವ, ಉಪನ್ಯಾಸ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆ ಬಳಕೆಯ ಬಗ್ಗೆ ಪುನರ್‌ಮನನದ ಅವಶ್ಯವಿದೆ. ಬೆಂಗಳೂರಿನ ಕೆಲ ಪ್ರದೇಶದಲ್ಲಿ ಕನ್ನಡಿಗರ ಸಂಖ್ಯೆ ಶೇ.೪೫ಕ್ಕಿಂತ ಕಡಿಮೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಹಿತಿ ಮಹಿಪಾಲರಡ್ಡಿ ಮುನ್ನೂರ ಮಾತನಾಡಿ, ರೇನ್ ರೇನ್ ಗೋ ಅವೇ ಎನ್ನುವುದು ಬಿಟ್ಟು, ಬಾರೋ ಬಾರೋ ಮಳೆರಾಯ ಎನ್ನುವ ಶಿಕ್ಷಣ ಕೊಡಿಸಬೇಕಿದೆ. ದಯನೀಯ ಸ್ಥಿತಿಯಲ್ಲಿ ಕನ್ನಡಿಗರಿz್ದೆÃವೆ. ಇಂಗ್ಲಿಷ್ ಕಿಸೆಯ ಹಣದ ಭಾಷೆಯಾಗಿದ್ದು, ಕನ್ನಡ ತಾಯಿ ಹೃದಯದ ಭಾಷೆ ಎಂದರು.

ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಉಪನ್ಯಾಸ ನೀಡಿ, ಭಾಷೆಯ ಅಭಿವ್ಯಕ್ತಿಯಲ್ಲಿ ಬದಲಾವಣೆಗಳು ಆಗಿವೆ. ಹಳೆಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ ಸೇರಿ ಇತ್ತೀಚಿನ ದಿನಗಳಲ್ಲಿ ನವೋದಯ, ದಲಿತ, ಬಂಡಾಯ, ನವ್ಯ, ಗಜಲ್ ಸೇರಿ ಹಲವು ಪ್ರಕಾರಗಳು ಸೃಷ್ಟಿಯಾಗಿವೆ. ಒಳಗಣ್ಣಿನಿಂದ ವಿಷಯವನ್ನು ಸಾಹಿತ್ಯ ಅರಿತು ಹೊರ ಹಾಕುತ್ತದೆ ಎಂದರು.

ಆದಿಲ್‌ಶಾಹಿ, ಸುಲ್ತಾನರು, ನಿಜಾಮರಿಂದ ಕನ್ನಡ ಕುಂದಿತ್ತು. ಆದರೆ ಜನಪದರ ಕನ್ನಡವನ್ನು ಜನಮಾನಸದಲ್ಲಿ ಉಳಿಸಿದರು. ಪ್ರತಿ ಮನೆಯಲ್ಲೂ ಕನ್ನಡ ನಾಲಿಗೆಯಲ್ಲಿ ನುಲಿಯುವಂತೆ ಮಾಡಿದರು. ಜಿಲ್ಲೆಯಲ್ಲಿ ಹಲವು ಸಾಹಿತಿಗಳು ಸಾರಸ್ವತ ಲೋಕ ಶ್ರೀಮಂತಗೊಳಿಸಿದರು ಎಂದು ಹೇಳಿದರು.

ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರಿಗೆ ವಯೋಶ್ರೆಷ್ಠ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತಿಥಿಗಳಾಗಿ ವಿಜ್ಞಾನ ಪರಿಷತ್ ಮಾಜಿ ಅಧ್ಯಕ್ಷ ಗಿರೀಶ ಕಡ್ಲೇವಾಡ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ್, ಇನ್ನರ್ ವಿಲ್ ಕ್ಲಬ್ ಉಪಾಧ್ಯಕ್ಷೆ ಮಹಾದೇವಿ ಪಾಟೀಲ್, ಚಂದ್ರಶೇಖರ ಕರಜಗಿ, ಆಶಾ ಹರಸೂರ, ಡಾ.ವಿಜಯಶ್ರೀ ಮಠದ, ಚನ್ನಮಲ್ಲಯ ಹಿರೇಮಠ, ಬಾಬುರಾವ ಕೋಬಾಳ, ಎಸ್.ಕೆ.ಬಿರಾದಾರ ಇತರರಿದ್ದರು. ಶಿವಲೀಲಾ ಎಸ್.ಕೆ. ನಿರೂಪಣೆ ಮಾಡಿದರು. ಶಿವಪುತ್ರ ಚಿತ್ತಾಪುರ ಸ್ವಾಗತಿಸಿದರು.