ಬಾಗೂರು: ಹೋಬಳಿಯ ನಾಗರ ನವಿಲೇ ಗ್ರಾಮದ ಐತಿಹಾಸಿಕ ಪಂಚಲಿಂಗಗಳ ಕ್ಷೇತ್ರದ ಶ್ರೀ ನಾಗೇಶ್ವರ ಸ್ವಾಮಿ, ಗ್ರಾಮದೇವತೆ ಕೆಂಪಮ್ಮ ದೇವಿ, ಚಿಕ್ಕೋನಹಳ್ಳಿ ಅಮರಗಿರಿ ರಂಗನಾಥಸ್ವಾಮಿ ತೆಪ್ಪೋತ್ಸವ ಶ್ರದ್ಧಾಭಕ್ತಿಗಳಿಂದ ಸಾವಿರಾರು ಭಕ್ತರ ನಡುವೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಶಾಸಕ ಸಿ.ಎನ್. ಬಾಲಕೃಷ್ಣ ಅವರು ಕೆರೆಗೆ ಬಾಗಿನ ಅರ್ಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿ ನಂತರ ಮಾತನಾಡಿ, ರಾಜ್ಯದಿಂದ ನಾಗದೋಷ ನಿವಾರಣೆಗೆ ಬರುವ ಭಕ್ತರ ಅನುಕೂಲಕ್ಕೆ 5 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ಮಾಡಿಸುವುದಾಗಿ ತಿಳಿಸಿದರು. ಸರ್ಪದೋಷ, ಕಂಕಣ ಭಾಗ್ಯ, ಪುತ್ರ ಸಂತಾನ ಭಾಗ್ಯಕ್ಕೆ ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಿದ್ದು, ಅವರ ಅನುಕೂಲಕ್ಕೆ ಹಾಸನ ಬಾಗುರು ತಿಪಟೂರು ಚನ್ನರಾಯಪಟ್ಟಣ ಹಿರೀಸಾವೆ ಮಾರ್ಗದಿಂದ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ನಾಲ್ಕು ಮಾರ್ಗಗಳಿಂದ ಬರುವ ಭಕ್ತರಿಗೆ ಮಾರ್ಗಸೂಚಿ ಬೋರ್ಡ್‌ಗಳನ್ನು ಹಾಕಿಸಿ ಇನ್ನು ಹೆಚ್ಚಿನ ಪೂಜೆಗಳಿಗೆ ಅವಕಾಶ ಕಲ್ಪಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಗೀತಾ ಗೋಪಾಲಸ್ವಾಮಿ, ಎ.ಸಿ. ಆನಂದ್ ಕುಮಾರ್, ಎನ್. ಪರಮೇಶ್, ಲಾಯರ್ ಅಣ್ಣಪ್ಪ, ಚಂದ್ರಪ್ಪ, ನಿವೃತ್ತ ಇಂಜಿನಿಯರ್ ಸದಾಶಿವಪ್ಪ, ಎನ್. ಕೆ. ನಾಗಪ್ಪ, ಪುಟ್ಟರಾಜು, ಎನ್.ಬಿ. ನಾಗರಾಜ್, ಜಯದೇವಪ್ಪ, ಕೊಪ್ಪಲು ನಾಗೇಶ್, ಎನ್. ಕಾಂತರಾಜ್, ಎನ್.ಎಲ್. ನಾಗರಾಜ್, ಎನ್. ದಿನೇಶ್, ರವೀಶ್, ನವೀನ್, ಕುಮಾರಸ್ವಾಮಿ, ಶಿವಕುಮಾರ್, ಚೆವೆನಹಳ್ಳಿ ರಾಮೇಗೌಡ, ಧರಣೇಶ್, ಸಂಪತ್ ಕುಮಾರ್ ಇತರರಿದ್ದರು.